
ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲಯನ್ ಶ್ರೀ ರಾಘವ್ ಪಡೀಲ್ ರವರು ಉದ್ಘಾಟಿಸಿ, ಮಾತನಾಡಿ, ಗಣರಾಜೋತ್ಸವದ ದಿನದಂದು ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯ, ವೈದ್ಯಕೀಯ ಶಿಬಿರವನ್ನು ಏರ್ಪಡಿಸುವುದು ಅಷ್ಟು ಸುಲಭದ ಸಂಗತಿ ಅಲ್ಲ ತುಂಬಾ ಕಷ್ಟಕರವಾದದ್ದು, ಆದರೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬಹಳ ಉತ್ತಮ ರೀತಿಯಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ ಇವರು ಮಾತನಾಡಿ ನಮ್ಮ ಸಂಘದ ಪ್ರತಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ ಆಯೋಜಿಸುತಿದ್ದು, ನಮ್ಮ ಪರಿಸರದ ಸುತ್ತಮುತ್ತಲಿನ ಬಡ ವರ್ಗದ ಜನರಿಗೆ ಇಂತಹ ಶಿಬಿರಗಳಿಂದ ತುಂಬಾ ಪ್ರಯೋಜನವಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಗೋಪಾಲ್ ಎಂ, ಶ್ರೀ ರಮನಾಥ್ ಸನಿಲ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್öನ ಅಧ್ಯಕ್ಷರಾದ ಶ್ರೀ ವಾಮನ್ ಕೆ, ಕುದ್ರೋಳಿ ಯುವಕ ಸಂಘ (ರಿ) ಕುದ್ರೋಳಿ ಉಪಾಧ್ಯಕ್ಷರಾದ ಶ್ರೀ ರವೀಂದ್ರ ಆರ್ ಆರ್, ಕೋಶಾಧಿಕಾರಿ ಶ್ರೀ ದಿನೇಶ್ ಅಂಚನ್, ಮಹಿಳಾ ಸಂಚಾಲಕಿ ಶ್ರೀಮತಿ ಸುಮನಾ ಸುನೀಲ್, ವೈದ್ಯರಾದ ಡಾ. ಅತಿರಾ, ಸಂಘದ ಲಾಲ್ಭಾಗ್ ಶಾಖೆಯ ಶಾಖಾಧಿಕಾರಿ ಶ್ರೀಮತಿ ಯಶವಂತಿ, ಮತ್ತಿತರರು ಉಪಸ್ಧಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸೆ, ಕಣ್ಣಿನ ತಪಾಸಣೆ ಮಾಡಲಾಯಿತು..
ಕುದ್ರೋಳಿ ಯುವಕ ಸಂಘ (ರಿ) ಕುದ್ರೋಳಿ ಅಧ್ಯಕ್ಷರಾದ ಅಶೋಕ್ ಕುಮಾರ್ ಅವರು ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ರಾಜೇಶ್ ಕುದ್ರೋಳಿ ವಂದಿಸಿದರು. ಶ್ರೀಮತಿ ವಿಜಯಶ್ರೀ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.