ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂರುವೆಲ್ ಶಾಖೆಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂದೂರುವೆಲ್ ಶಾಖೆಯಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶ್ರೀ ಕೃತೀಶ್ ಕುಮಾರ್, ಶ್ರೀಮತಿ ಪುಷ್ಪಲತಾ ಕೆ., ಶ್ರೀ ಮಾದವ ಕೋಟ್ಯಾನ್, ಶ್ರೀ ಗೋಪಾಲ್ ಸುವರ್ಣ, ಶ್ರೀ ಕರುಣಾನಂದ ರಾವ್ ಹಾಗೂ ಶ್ರೀ ಅನಂತರಾಮ್ ಭಟ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಂಘದ ಸದಸ್ಯರಾದ ಶ್ರೀ ಕೃತೀಶ್ ಕುಮಾರ್ ಇವರು ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ನೇತ್ರತ್ವದಲ್ಲಿ ಸಂಘದ ಸದಸ್ಯರಿಗೆ ಉತ್ತಮ ಸೇವೆ ನಿಡುತ್ತಿದೆ. ಬೆಂದೂರ್‌ವೆಲ್ ಶಾಖೆಯಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿ ಇದ್ದು ಇಲ್ಲಿ ಸ್ಥಳದ ಕೊರತೆ ಇರುವುದರಿಂದ ಶಾಖೆಯನ್ನು ವಿಸ್ತರಿಸಿದರೆ ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತದೆ” ಎಂದು ಸಲಹೆ ನೀಡಿದರು.
ಸದಸ್ಯರಾದ ಶ್ರೀ ಮಾದವ ಕೋಟ್ಯಾನ್ ಇವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅತೀ ಕಡಿಮೆ ಅವಧಿಯಲ್ಲಿ ೩೩ ಶಾಖೆಯನ್ನು ತೆರೆದಿರುವುದು ಅಭಿನಂದನಾರ್ಹವಾಗಿದೆ. ಇದಕ್ಕಾಗಿ ಶ್ರಮಿಸಿದ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಯನ್ನು ತಿಳಿಸಿದರು.
ಸದಸ್ಯರಾದ ಶ್ರೀ ಶಂಕರ ಶೆಟ್ಟಿಯವರು ಮಾತನಾಡಿ, “ಬೆಂದೂರ್‌ವೆಲ್ ಶಾಖೆಯು ಆರಂಭದಿAದಲು ಉತ್ತಮ ವ್ಯವಹಾರ ನಡೆಸುತ್ತಿದ್ದು , ಹಿರಿಯ ಸದಸ್ಯರಿಗೆ ಮನೆಗೆ ಬಂದು ಬ್ಯಾಂಕಿAಗ್ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ. ನಮ್ಮಂತ ಹಿರಿಯ ನಾಗರಿಕರಿಗೆ ಇದರಿಂದ ತುಂಬಾ ಪ್ರಯೋಜನವಾಗುತ್ತಿದೆ” ಎಂದು ತಿಳಿಸಿದರು.
ಶ್ರೀ ವಾಮನ್ ಮೈಂದಾನ್ ಹಾಗೂ ಶ್ರೀ ಲಿಯೋ ಆಂಬ್ರೋಝ್ ರವರು ಸಂಘದ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, “ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಇಂದು ೩೩ ಶಾಖೆಯನ್ನು ಹೊಂದಲು ಕಾರಣೀಭೂತವಾಗಿದೆ. ಸಂಘದ ಪಾಲುಬಂಡವಾಳವು ೨೨.೫ ಲಕ್ಷದಿಂದ ಪ್ರಾರಂಭವಾಗಿ ಇಂದು ೩೦೦ ಕೋಟಿ ಠೇವಣಿಯಾಗಲು ಗ್ರಾಹಕರ ಸಹಕಾರದಿಂದ ಸಾದ್ಯವಾಗಿದೆ ಎಂದು ಪ್ರಶಂಸಿದರು . ಸಂಸ್ಥೆಯು ಕೇವಲ ಬ್ಯಾಂಕಿAಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಸಂಘದ ಗ್ರಾಹಕರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರವನ್ನು ನಮ್ಮ ಸಂಘವು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಇದೇ ಬರುವ ದಿನಾಂಕ ೦೮.೦೨.೨೦೨೬ ರಂದು ಸಂಘದ ಬೆಂದೂರ್‌ವೆಲ್ ಶಾಖೆಯ ವತಿಯಿಂದ ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಉಚಿತ ಆರೋಗ್ಯ ಶಿಭಿರವನ್ನು ಹಮ್ಮಿಕೊಂಡಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು. ಮುಂದಿನ ದಿನಗಳಲ್ಲೂ ಸಂಘದ ಗ್ರಾಹಕರ ಸಹಕಾರ ನಿರಂತರವಾಗಿರಲಿ” ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ನಿರ್ದೇಶಕರಾದ ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸೀತಾರಾಮ್ ಎನ್., ಶ್ರೀ ರಮನಾಥ್ ಸನಿಲ್ , ಶ್ರೀ ಮುದ್ದು ಮೂಡುಬೆಳ್ಳೆ , ಶ್ರೀ ಬಿ ಪಿ ದಿವಾಕರ , ಶ್ರೀ ಗೋಪಾಲ್ ಎಮ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಸಂಘದ ಬೆಂದೂರುವೆಲ್ ಶಾಖೆಯ ಸಿಬ್ಬಂದಿಯಾದ ಕು. ನಿಶ್ಚಿತ ಸಾಲಿಯಾನ್ ರವರು ಸ್ವಾಗತಿಸಿ, ಶಾಖೆಯ ಸಿಬ್ಬಂದಿಯಾದ ಕು. ಪವಿತ್ರ ವಂದಿಸಿದರು. ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಸೌಮ್ಯಲತಾ ಕಾರ್ಯಕ್ರಮ ನಿರೂಪಿಸಿದರು.