ನೂತನ ೩೪ನೇ ಬೋಳಾರ ಶಾಖೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಮಂಗಳವಾರ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ” ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರುಗಿತು.
ನೂತನ 34ನೇ ಬೋಳಾರ ಶಾಖೆಯ ಆಮಂತ್ರಣ ಪತ್ರಿಕೆಯನ್ನು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ಶ್ರೀ ಎಮ್. ಅರುಣ್ ಐತಾಳ್ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ದಿವಾಕರ್ ಬಿ.ಪಿ, ಶ್ರೀಮತಿ ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಸ್ಥಳೀಯ ಮಂಗಳೂರು ನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಶ್ರೀಮತಿ ಭಾನುಮತಿ, ಬಿಲ್ಲವ ಸಂಘ ಮಂಗಳಾದೇವಿಯ ಗೌರವ ಅಧ್ಯಕ್ಷರಾದ ಶ್ರೀ ಸದಾನಂದ ಸಾಲಿಯಾನ್, ಅಧ್ಯಕ್ಷರಾದ ಶ್ರಿ ರಾಜರತ್ನ ಸನಿಲ್, ಉಪಾಧ್ಯಕ್ಷರಾದ ಶ್ರೀ ದಿನೇಶ್, ಕಾರ್ಯದರ್ಶಿಯಾದ ಶ್ರೀ ರಮಾನಂದ ಪೂಜಾರಿ, ಸಂಚಾಲಕರಾದ ಶ್ರಿ ಉದಯ ಕುಮಾರ್, ಶ್ರೀಮತಿ ಲಲಿತಾ ಬಿ., ನೂತನ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಮೋಹನ್ ರಾಜ್, ಶ್ರೀ ಚಂದ್ರಹಾಸ್ ಸುವರ್ಣ, ಶ್ರೀ ಆನಂದ, ಶ್ರೀ ಮೋಹನ್ ಕುಮಾರ್, ಶ್ರೀ ಅರುಣ್ ಕುಮಾರ್ ಸುವರ್ಣ, ಮತ್ತಿತ್ತರರು ಉಪಸ್ಥಿತರಿದ್ದರು.