
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಪ್ರತಿಯೊಂದು ನಡೆಯಲ್ಲಿ ಏನಾದರೊಂದು ವಿಶೇಷತೆ ಇರುತ್ತದೆ. ಆತ್ಮಶಕ್ತಿ ಎಂಬ ಹೆಸರೇ ವಿಶೇಷವಾದುದು. ಈ ಹೆಸರು ಇಟ್ಟವರನ್ನೂ ಸನ್ಮಾನಿಸಬೇಕು. ಒಂದು ಸಹಕಾರಿ ಸಂಘದ ಶಾಖೆಯ ಉದ್ಘಾಟನೆ ವೇಳೆ ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಜರಿರುವುದು ಎಂದರೆ ಆತ್ಮಶಕ್ತಿ ಸಹಕಾರಿ ಸಂಘವು ಎಷ್ಟು ಗಟ್ಟಿಯಾಗಿ ಬೆಳೆದಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು ಎಂದು ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಸಹಕಾರಿ ಸಂಘಗಳು ಉನ್ನತ ಮಟ್ಟದ ಸಾಧನೆ ಮಾಡಿ ಬೆಳೆಯಬೇಕಾದರೆ ಸಹಕಾರಿಗಳ ಪರಸ್ಪರ ಸಹಕಾರ ಬೇಕು. ೧೪ ವರ್ಷದಲ್ಲಿ ೩೪ ಶಾಖೆಗಳನ್ನು ತೆರೆಯುವುದು ಎಂದರೆ ಸಾಮಾನ್ಯದ ಮಾತಲ್ಲ. ಇದಕ್ಕೆ ಆತ್ಮಶಕ್ತಿಯ ಜೊತೆಗೆ ಆತ್ಮಸ್ಥೈರ್ಯವೂ ಬೇಕು. ಸಂಘದ ನಿರ್ದೇಶಕರಲ್ಲಿ ಆ ರೀತಿಯ ಆತ್ಮಸ್ಥೈರ್ಯ ಇರುವುದರಿಂದಲೇ ಇಷ್ಟೊಂದು ಕಡಿಮೆ ಅವಧಿಯಲ್ಲಿ ೩೪ ಶಾಖೆ ತೆರೆದು ೩೦೦ ಕೋಟಿ ರೂ. ಮೀರಿದ ಠೇವಣಿ ಸಂಗ್ರಹ ಸಾಧ್ಯವಾಗಿದೆ. ಸಂಘದ ನಿರ್ದೇಶಕರು, ಸದಸ್ಯರು ಏಕ ಮನಸ್ಸಿನಿಂದ ಸಾಮಾಜಿಕ ಕಳಕಳಿ, ಸೇವಾ ಮನೋಭಾವದಿಂದ ಕೆಲಸ ಮಾಡಿದ್ದರಿಂದ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಆತ್ಮಶಕ್ತಿ ಸಹಕಾರಿ ಸಂಘದಿAದ ಜನರಿಗೆ ಆತ್ಮಸ್ಥೈರ್ಯ ತುಂಬಿಸುವ ಕೆಲಸವಾಗಲಿ ಎಂದು ಶುಭ ಹಾರೈಸಿದರು.
ಸಮಾಜ ಸೇವಕಿ ತಾರಾ ಹೇಮಚಂದ್ರ ರವರು ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಭದ್ರತಾಕೋಶ ಉದ್ಘಾಟನೆ ಮಾಡಿದ ಮಂಗಳೂರು ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿಯ ಅಧ್ಯಕ್ಷರಾದ ರಂಜನ್ ಮಿಜಾರ್ ರವರು ಮಾತನಾಡಿ, ಮುಂದಿನ ಐದು ವರ್ಷದಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಐವತ್ತು ಶಾಖೆಗಳು ಆಗಿ ಸಾವಿರಾರು ಜನರಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಸಿ. ಪ್ರಸಾದ್ ರೆಡ್ಡಿ ಗಣಕೀಕೃತ ಬ್ಯಾಂಕಿAಗ್ಗೆ ಚಾಲನೆ ನೀಡಿ ಮಾತನಾಡಿ, ಆತ್ಮಶಕ್ತಿ ಸಹಕಾರ ಸಂಘದ ದೃಢಚಿತ್ತದಿಂದ ಇಷ್ಟೊಂದು ಕಡಿಮೆ ಅವಧಿಯಲ್ಲಿ ೩೪ ಶಾಖೆ ತೆರೆಯುವಂತೆ ಆಗಿದೆ. ಯಾವುದೇ ಒಂದು ಸಹಕಾರಿ ಸಂಘ ಸ್ಥಾಪನೆ ಆದಾಗ ಅದಕ್ಕೊಂದು ಗುರಿ ಇರುತ್ತದೆ. ಆದರೆ ಅಷ್ಟೆ ಸಾಕಾಗದು. ಸೇವಾ ಮನೋಭಾವ, ದೃಢ ಸಂಕಲ್ಪ, ಧೈರ್ಯವೂ ಬೇಕು. ಇವೆಲ್ಲವೂ ಇದ್ದರೆ ಉನ್ನತ ಸಾಧನೆ ಮಾಡಬಹುದು. ಆತ್ಮಶಕ್ತಿ ಸಹಕಾರಿ ಸಂಘವು ಅದನ್ನು ಮಾಡಿ ತೋರಿಸಿದೆ. ನಿಸ್ವಾರ್ಥ ಮನೋಭಾವದಿಂದ ಇವೆಲ್ಲವನ್ನೂ ಮಾಡಿದರೆ ಪ್ರಗತಿ ಸಾಧಿಸಲು ಸಾಧ್ಯವಿದೆ. ನಂಬಿಕೆ ಇದ್ದರಷ್ಟೆ ಒಂದು ಸಹಕಾರಿ ಸಂಘದಲ್ಲಿ ಠೇವಣಿ ಇಡುತ್ತಾರೆ. ಆ ನಂಬಿಕೆ ಆತ್ಮಶಕ್ತಿ ಸಹಕಾರಿ ಸಂಘದ ಮೇಲಿರುವುದರಿಂದಲೇ ದೊಡ್ಡ ಮಟ್ಟದಲ್ಲಿ ಠೇವಣಿ ಸಂಗ್ರಹಿಸಲೂ ಸಾಧ್ಯವಾಗಿದೆ. ಆತ್ಮಶಕ್ತಿ ಸಹಕಾರಿ ಸಂಘದ ಉದ್ಯೋಗಿಗಳಲ್ಲಿ ಶೇ.೯೫ರಷ್ಟು ಮಹಿಳಾ ಸಿಬ್ಬಂದಿಗಳೇ ಇರುವುದು ಕೂಡ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸಂಸ್ಥೆಯ ದೂರದೃಷ್ಟಿಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
ನಿರಖು ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸರ್ವವ್ಯಾಪಿ, ಸರ್ವಸ್ಪರ್ಶಿ ಎಂಬ ಕಲ್ಪನೆಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಕೆಲಸ ನಡೆದಿದೆ. ೧೪ ವರ್ಷದಲ್ಲಿ ೩೪ ಶಾಖೆ ತೆರೆಯುವುದು ಸುಲಭದ ಕೆಲಸವಲ್ಲ. ಸರ್ವವ್ಯಾಪಿ, ಸರ್ವಸ್ಪರ್ಶಿ ಎಂಬ ಕಲ್ಪನೆಯಿರುವುದರಿಂದಲೇ ಅದು ಸಾಧ್ಯವಾಗಿದೆ. ಒಂದು ಆರ್ಥಿಕ ಸಂಸ್ಥೆ ಲಾಭ ಗಳಿಕೆಯನ್ನಷ್ಟೇ ತಮ್ಮ ಕೆಲಸ ಎಂದು ಅಂದುಕೊಳ್ಳದೆ ನಿರಂತರ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗಷ್ಟೇ ಉನ್ನತ ಪ್ರಗತಿ ದಾಖಲಿಸಬಹುದು. ಆತ್ಮಶಕ್ತಿ ಸಹಕಾರಿ ಸಂಘವು ಅದನ್ನು ಮಾಡಿ ತೋರಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಹೊಸ ಶಾಖೆಗೆ ಇದುವರೆಗೆ ರೂ. ಮೂರು ಕೋಟಿ ಗೂ ಮಿಕ್ಕಿ ಠೇವಣಿ ಸಂಗ್ರಹಿಸಲಾಗಿದೆ. ಈ ತಿಂಗಳಾAತ್ಯದೊಳಗೆ ೧೦ ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಇಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಆಶಿಸಿದರು.
ಮಂಗಳಾದೇವಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಅಶೋಕ್ ಕುಮಾರ್ ಇ-ಮುದ್ರಾಂಕ ಸೇವೆಗೆ ಚಾಲನೆ ನೀಡಿದರು. ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಫೆಡರೇಷನ್ನ ಅಧ್ಯಕ್ಷರಾದ ದಿಲ್ರಾಜ್ ಆಳ್ವ ಭವಿಷ್ಯ ಸುರಕ್ಷಾ ಯೋಜನೆಗೆ ಚಾಲನೆ ನೀಡಿದರು. ಬಿಲ್ಲವ ಸಂಘ ಮಂಗಳಾದೇವಿಯ ಅಧ್ಯಕ್ಷರಾದ ರಾಜರತ್ನ ಸನಿಲ್ ಉಳಿತಾಯ ಖಾತೆಗೆ ಚಾಲನೆ ನೀಡಿದರು. ದ.ಕ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್ ಆವರ್ತನ ಠೇವಣಿಗೆ ಚಾಲನೆ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಭಾನುಮತಿ ಪಿಗ್ಮಿ ಖಾತೆಗೆ ಚಾಲನೆ ನೀಡಿದರು. ಉದ್ಯಮಿ ರಮಾನಂದ ಪೂಜಾರಿ ಹಾಗೂ ಕಟ್ಟಡದ ಮಾಲಿಕರಾದ ಜೆನೆಟ್ ಮೆಲ್ವಿನ್ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಆತ್ಮಶಕ್ತಿ ಸಹಕಾರ ಸಂಘದ ನಿರ್ದೇಶಕರಾದ ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸೀತಾರಾಮ ಎನ್., ಶ್ರೀ ರಮಾನಾಥ ಸನಿಲ್, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ದಿವಾಕರ್ ಬಿ.ಪಿ., ಶ್ರೀ ಗೋಪಾಲ್ ಎಂ., ಶ್ರೀಮತಿ ಉಮಾವತಿ, ಮತ್ತಿತ್ತರರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ ವಂದಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ನ ಜೊತೆ ಕಾರ್ಯದರ್ಶಿ ಶ್ರೀ ವಿಶ್ವನಾಥ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.