ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ’’ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮುಡಿಪು ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಶಿವರಾಮ್ ಬಿ, ಶ್ರೀ ಎಮ್ ಶಂಕರ್ ಭಟ್, ಶ್ರೀ ಸುಂದರ್ ಪೂಜಾರಿ, ಶ್ರೀ ಗುರುವಪ್ಪ ಪೂಜಾರಿ, ಶ್ರೀಮತಿ ಶಶಿಕಲಾ ಎಮ್ ಮತ್ತು ಶ್ರೀಮತಿ ಅಮೀನಾ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಟಾಟಿಸಿದರು. ಸಂಘದ ಸದಸ್ಯರಾದ ಶ್ರೀ ಶಿವರಾಮ್ ಬಿ ರವರು ಮಾತನಾಡಿ ಸಂಘದ ಬೆಳವಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲದೆ ಸಂಘದ ಶಾಖೆಗಳು ಕರ್ನಾಟಕದಾದ್ಯಂತ ಪ್ರಾರಂಭವಾಗಲಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸಂಘದ ಸದಸ್ಯರಾದ ಶ್ರೀ ಮುರಳಿಧರ್ ರಾವ್ ರವರು ಮಾತನಾಡಿ, ಸಂಘದ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ಸಂಘವು ಬ್ಯಾಂಕಿAಗ್ ಸೇವೆಯ ಜೊತೆಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಸಾರ್ವಜನಿಕರು ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೆಪಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಗಂಜಿಮಠ ಶಾಖೆಯ ಪ್ರಯುಕ್ತ ಮರಾಠಿ ಸಮಾಜ ಸೇವಾ ಸಂಘ (ರಿ.) ಗಂಜಿಮಠ , ಅಳಿಕೆ ಫ್ರೆಂಡ್ಸ್ (ರಿ.) ಗಂಜಿಮಠ , ಫ್ರೆಂಡ್ಸ್ ಕ್ಲಬ್ ಮಟ್ಟಿ ಬಡಗುಳಿಪಾಡಿ, ಕಲಾವರ್ಧಕ ಯುವಕ ಮಂಡಲ (ರಿ.) ನಾರ್ಲ ಮೊಗರು ಹಾಗೂ ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು Œಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯರ ತಂಡದೊAದಿಗೆ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಶಿಬಿರವು ಮರಾಠಿ ಸಮಾಜ ಸೇವಾ ಸಂಘ (ರಿ.) ಗಂಜಿಮಠ ಇಲ್ಲಿ ಜರುಗಿತು .

ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇದರ ಅಧ್ಯಕ್ಷರಾದ ಶ್ರೀ ಮಹೇಶ್ ಶೆಟ್ಟಿ ಇವರು ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ವಿವಿಧ ಸಂಘ ಸಂಸ್ಥೆಗಳೂAದಿಗೆ ಸೇರಿ ನಡೆಸುವ ಜನಪರ ಕಾರ್ಯಕ್ರಮವು ಶ್ಲಾಘನೀಯ, ಆರೋಗ್ಯವೇ ಭಾಗ್ಯ ಎಂಬAತೆ, ಮನುಷ್ಯನ ಆರೋಗ್ಯ, ಹಿತವಾದ ಜೀವನ ಶೈಲಿಯಲ್ಲಿ ಸಮಾಜಕ್ಕೆ ಸೇವೆಯನ್ನು ನೀಡುವಂತಾಗಲಿ, ಈ ಶಿಬಿರದ ಸದುಪಯೋಗವನ್ನು ಪಡೆಯುವಂತೆ ತಿಳಿಸಿದರು. ಈ ಕಾರ್ಯಕ್ರಮದ ಇನ್ನೊರ್ವ ಅಥಿತಿಯಾದ ಉದ್ಯಮಿ ಶ್ರೀ ಚಂದ್ರಹಾಸ್ ನಾರ್ಲ ಇವರು ಮಾತನಾಡಿ ನಮ್ಮ ಊರಿನಲ್ಲಿ ವೈದ್ಯಕೀಯ ಶಿಬಿರದ […]

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ (ನಿ.) ಬೆಂಗಳೂರು ಇದರ 20ನೇ ವಾರ್ಷಿಕ ಸಾಮಾನ್ಯ ಸಭೆಯು ಕೆ.ಇ.ಬಿ ಇಂಜಿನಿಯರ್ಸ್, ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಬೆಂಗಳೂರಿನಲ್ಲಿ ಮಹಾಮಂಡಳದ ಅಧ್ಯಕ್ಷರಾದ ಶ್ರೀ ವಿ. ರಾಜು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಾಮಾನ್ಯ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಹಾಗೂ ಇ-ಸ್ಟಾಂಪಿ0ಗ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭವು ಜರುಗಿತು.

ಈ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ “ಅತಿ ಹೆಚ್ಚು ಮೊತ್ತದ ಇ-ಸ್ಟಾಂಪಿAಗ್ ಮುದ್ರಿಸಿರುವ ಸಂಘ” ಪ್ರಶಸ್ತಿಯನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಮಹಾಮಂಡಳದ ನಿರ್ದೇಶಕರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ರವರಿಗೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ ವಿ. ರಾಜು ರವರು ನೀಡಿ ಗೌರವಿಸಿದರು. ಈ ಸನ್ಮಾನ ಸಮಾರಂಭದಲ್ಲಿ ಮಹಾಮಂಡಳ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಕೆ. ಲಲಿತ ಜಿ.ಟಿ. ದೇವೇಗೌಡ, ಉಪಾಧ್ಯಕ್ಷರಾದ ಶ್ರೀ ಕೆ. ಕೆ ಮಹೇಂದ್ರ ಪ್ರಸಾದ್ […]

ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಮಂಗಳೂರು ಇದರ ಪ್ರಧಾನ ಕಛೇರಿ “ಆತ್ಮಶಕ್ತಿ ಸೌಧ” ಪಡೀಲ್‌ನಲ್ಲಿ ಆಚರಿಸಲಾಯಿತು. ಹಿರಿಯ ನಾಟಿ ವೈದ್ಯರಾದ ಶ್ರೀಯುತ ಕಲಾಯಿ ಈಶ್ವರ ಪೂಜಾರಿ ಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತಾಡಿದ ಇವರು ಆಟಿ ತಿಂಗಳ ಮಹತ್ವವನ್ನು ತಿಳಿಸಿ, ನಾಟಿ ಔಷಧಿ ಪದ್ದತಿಗಳ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಕಂಕನಾಡಿ ನಗರ ಪೊಲೀಸ್ ಠಾಣೆಯ ಕ್ರೆöÊಮ್ ಬ್ರಾಂಚ್‌ನ ಪರಶುರಾಮ್ ರವರು ಇತ್ತೀಚಿನ ದಿನಗಳಲ್ಲಿ ಬ್ಯಾಂಕಿAಗ್ ಕ್ಷೇತ್ರದಲ್ಲಿ ಅಧಿಕವಾಗುತ್ತಿರುವ ಸೈಬರ್ ಅಪರಾಧದ ಬಗ್ಗೆ ಜಾಗೃತಿ ವಹಿಸುವಂತೆ ಹಾಗೂ ಗ್ರಾಹಕರಿಗೆ ಯಾವ ರೀತಿ ಮುನ್ನೆಚರಿಕೆಯನ್ನು ನೀಡಬೇಕು ಎಂಬ ವಿಷಯದ ಬಗ್ಗೆ ಮಾಹಿತಿಗಳನ್ನು ತಿಳಿಸಿದರು. ಮೂಲ್ಕಿ ಪೋಲಿಸ್ ಠಾಣೆಯ ಮಹಿಳಾ ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಶ್ರೀಮತಿ ಅನಿತಾ ಕೆ., ಯವರು ಮಾತನಾಡಿ, ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶವನ್ನು ನೀಡಿ ಅತ್ಯುತ್ತಮವಾಗಿ ಕಾರ್ಯನೀರ್ವಹಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಹಲವಾರು ಜಿಲ್ಲಾ ಹಾಗೂ ರಾಜ್ಯ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಮಂಗಳೂರು ಇದರ ಪ್ರಧಾನ ಕಛೇರಿಯಲ್ಲಿ ಸ್ವಾತಂತ್ಯೋತ್ಸವವನ್ನು ಆಚರಿಸಲಾಯಿತು. ಪ್ರಧಾನ ಕಛೇರಿಯಲ್ಲಿ ನಡೆದ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ನಿವೃತ್ತ ಯೋಧ ಹೊನರರಿ ಕ್ಯಾಪ್ಟನ್ ಶ್ರೀನಿವಾಸ ಅಮೀನ್ ರವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಸೇನೆಯ ಸೇವೆಯಲ್ಲಿರುವಾಗ ಯುದ್ಧದ ಸಂದರ್ಭದಲ್ಲಿ ತಾವು ಪಾಲ್ಗೊಂಡಿದ್ದ ಕಾರ್ಯಚರಣೆ ಪ್ರಸ್ತಾಪಿಸಿ ಬಾವುಕರಾದರು. ದೇಶವು ಬಲಿಷ್ಟವಾಗಬೇಕಾದರೆ ಜನರು ಬಲಿಷ್ಟರಾಗಬೇಕು. ದೇಶವನ್ನು ಬಲಿಷ್ಟಗೊಳಿಸುವ ಜವಾಬ್ದಾರಿ ಪ್ರಜೆಗಳದ್ದು, ಕರಾವಳಿಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಭಾರತೀಯ ವಾಯುಪಡೆಯ ನಿವೃತ್ತ ಯೋಧರು ಹಾಗೂ ಸಹಕಾರ ಸಂಘಗಳ ನಿವೃತ್ತ ಉಪನಿಭಂದಕರಾದ ಶ್ರೀ ಚಂದ್ರಶೇಖರ್ ಸುವರ್ಣರವರು ಮಾತನಾಡಿ, ದೇಶ ಸೇವೆಯಲ್ಲಿ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತದವರು ಸೇವೆ ಸಲ್ಲಿಸುತ್ತಿದ್ದು, ನಮ್ಮ ಕರಾವಳಿ ಭಾಗದವರ ಸಂಖ್ಯೆ ತುಂಬಾ ಕಡಿಮೆಯಿದೆ. ದೇಶ ಸೇವೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ದೇಶ ಸೇವೆಯ ಕಾಯಕದ ಜೊತೆಗೆ ತಮ್ಮ ಭವಿಷ್ಯವನ್ನು ಕೂಡ ಕೆಲಸದ ಭದ್ರತೆಯೊಂದಿಗೆ ಗಟ್ಟಿ ಗೊಳಿಸಬಹುದು. ಅಗ್ನಿಪಥ್ ಯೋಜನೆಯನ್ನು ಸರಕಾರ ಜಾರಿಗೊಳಿಸಿದ್ದು, ಭವಿಷ್ಯದಲ್ಲಿ ಸೇನೆಗೆ ಸೇರುವವರಿಗೆ ಇದು ಒಂದು […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪಂಜಿಮೊಗರು ಶಾಖೆಯ ವತಿಯಿಂದ ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ಶ್ರೀ ಶಾರದೋತ್ಸವ ಸೇವಾ ಟ್ರಸ್ (ರಿ), ಹಿಂದೂ ಯುವಸೇನೆ ವಿದ್ಯಾನಗರ ಶಾಖೆ ಪಂಜಿಮೊಗರು ಯುವವಾಹಿನಿ (ರಿ.) ಕೂಳೂರು ಘಟಕ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ ಯೆನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ನುರಿತ ತಜ್ಞ ವೈದ್ಯ ತಂಡದವರಿAದ ಉಚಿತ ವೈದ್ಯಕೀಯ ನೇತ್ರ ತಪಾಸಣೆ ಮತ್ತು ದಂತ ತಪಾಸಣ ಚಿಕಿತ್ಸೆ ಶಿಬಿರವು ಶಾರದ ನಿಕೇತನ ಶ್ರೀ ಕೃಷ್ಣ ಭಜನಾ ಮಂದಿರದ ಅಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಪಂಜಿಮೊಗರು ವಾರ್ಡ್ನ ಕಾರ್ಪೋರೇಟರ್ ಆಗಿರುವ ಶ್ರೀ ಅನಿಲ್ ಕುಮಾರ್ ರವರು ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳೊAದಿಗೆ ಸೇರಿ ನಡೆಸುವ ಜನ ಪರ ಕಾರ್ಯಕ್ರಮಗಳು ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಡುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾಗಿರುವ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ 13ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಪ್ರಯುಕ್ತ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು “ಆತ್ಮಶಕ್ತಿ ಸೌಧ” ಬೈರಾಡಿಕೆರೆ ಹತ್ತಿರ, ಪಡೀಲ್ ಮಂಗಳೂರು ಇಲ್ಲಿ ಜರುಗಿತು . ಈ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶ್ರೀಯುತ ಹರೀಶ್ ಪಿ.ಡಿ ರವರು ಉದ್ಘಾಟಿಸಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರ ಮುಂದಾಳತ್ವದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಜಾಗೃತಿಯನ್ನು ಮೂಡಿಸುವಲ್ಲಿ ಸಫಲತೆಯನ್ನು ಕಂಡಿದೆ ಎಂದು ಈ ಶಿಬಿರಕ್ಕೆ ಶುಭ ಹಾರೈಸಿದರು.

ಶ್ರೀನಿವಾಸ್ ಇನ್ಸ್ಸ್ಟಿಟ್ಯೂಟ್ ಆಪ್ ಡೆಂಟಲ್ ಸಾಯನ್ಸ್ನ ದಂತ ವೈದ್ಯರಾದ ಡಾ. ಶಿಫಾಲಿ ಸಾಲಿಯಾನ್ ಮಾತನಾಡಿ, ಈ ಶಿಬಿರದಲ್ಲಿ ಉಚಿತ ದಂತ ತಪಾಸಣೆ, ಹುಳುಕು ಹಲ್ಲುಗಳ ಭರ್ತಿ, ಶುಚಿಗೊಳಿಸುವುದು, ಕೀಳುವುದು, ಮುಂತಾದ ಸೇವೆಗಳು ಲಭ್ಯವಿದ್ದು, ಸಂಘದ ಸದಸ್ಯರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ 2023-24 ನೇ ಸಾಲಿನ 13ನೇ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 08.09.2024ರ ಭಾನುವಾರ ಪೂರ್ವಾಹ್ನ 10.30ಕ್ಕೆ ಪಡೀಲಿನ ಬೈರಾಡಿಕೆರೆ ಹತ್ತಿರದ ಸಂಘದ ಪ್ರಧಾನ ಕಛೇರಿ “ಆತ್ಮಶಕ್ತಿ ಸೌಧ”ದ ಸಭಾಂಗಣದಲ್ಲಿ ಜರುಗಿತು.

ಸಂಘದ 2023-24ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್‌ರವರು ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘವು ಪ್ರಸ್ತುತ ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 33 ಶಾಖೆಗಳನ್ನು ಹೊಂದಿದ್ದು, 2024-25ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಹೊಸ ಶಾಖೆಗಳನ್ನು ತೆರೆದು, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ.275 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ. 210 ಕೋಟಿಗೂ ಮಿಕ್ಕಿ […]

ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). ಮಂಗಳೂರು ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಮಂಗಳೂರು ಇವರ ವೈದ್ಯರ ತಂಡದವರಿಂದ ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರವು ರಾಜ್ಯ ಸರಕಾರಿ ನೌಕರರ ಸಂಘದ ಸಮುದಾಯ ಭವನ ಕಟ್ಟಡದ ಎರಡನೇ ಮಹಡಿಯಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ರಾಜ್ಯ ಸರಕಾರಿ ನೌಕರರ ಸಂಘ ದ. ಕ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಹೆಚ್.ಗಣೇಶ್ ರಾವ್ ಇವರು ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರ ಮುಂದಾಳತ್ವದಲ್ಲಿ ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಜನರ ಕಾಳಜಿ ಮಾಡುತ್ತಿರುವುದು ಸಂಘದ ಉನ್ನತಿಗೆ ಮುಖ್ಯವಾದ ಕಾರಣ ಎಂದರು. ಈ ಕಾರ್ಯಕ್ರಮದಲ್ಲಿ ದ ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಮಂಗಳೂರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜಯಂತಿಯ ಆಚರಣೆಯನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಧಾರ್ಮಿಕ ಚಿಂತಕ ಹಾಗೂ ಸಂಘದ ಹಿರಿಯ ಸದಸ್ಯರಾದ ಶ್ರೀ ಮಾಧವ ಸುವರ್ಣ ರವರು ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸಿಬ್ಬಂದಿಗಳು ಭಜನಾ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ನಡೆಸಿಕೊಟ್ಟರು. ಪುರೋಹಿತರಾದ ಶ್ರೀಯುತ ರಾಜೇಶ್ ಶಾಂತಿ ಇವರು ಗುರುಪೂಜೆ ನಡೆಸಿ, ನಂತರ ಪ್ರಸಾದ ವಿತರಣೆಯನ್ನು ನಡೆಸಿದರು. ಈ ಶುಭ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ , ನಿರ್ದೇಶಕರುಗಳಾದ ಶ್ರೀ ಜಿ. ಪರಮೇಶ್ವರ್ ಪೂಜಾರಿ, ಶ್ರೀ ಸೀತಾರಾಮ್ ಎನ್., ಶ್ರೀ ರಮಾನಾಥ್ ಸನಿಲ್, ಶ್ರೀ ಗೋಪಾಲ್ ಎಮ್, ಶ್ರೀಮತಿ ಉಮಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ […]