ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಮಂಗಳೂರು ಇದರ ಅಳದಂಗಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ, ನಾರಾಯಣ ಗುರು ಸ್ವಾಮಿ ಸೇವಾ ಸಂಘ ಅಳದಂಗಡಿ ವಲಯ, ರೋಟರಿ ಕ್ಲಬ್ ಬೆಳ್ತಂಗಡಿ ಇವರ ಜಂಟಿ ಸಹಯೋಗದೊಂದಿಗೆ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ವೈದರ ತಂಡದವರಿAದ ಉಚಿತ ನೇತ್ರ ತಪಾಸಣೆ, ದಂತ ಚಿಕಿತ್ಸೆ, ಕ್ಯಾನ್ಸರ್ ತಪಾಸಣೆ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆ- ಬೆಳ್ತಂಗಡಿ ವಿಭಾಗದ ವತಿಯಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವು ಶ್ರೀಗುರು ಸಭಾಭವನ , ಅಳದಂಗಡಿ ಇಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಇದರ ಅಧ್ಯಕ್ಷರಾದ ಶ್ರೀಯುತ ರಂಜಿತ್ ಯಚ್.ಡಿ ಇವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮಾಡುತ್ತಿರುವುದು ಒಂದು ಒಳ್ಳೆಯ ಕೆಲಸ, ಯಾಕೆಂದರೆ ಆರೋಗ್ಯದಿಂದ ಇದ್ದರೆ ಮಾತ್ರ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯ. ಈ ಆರೋಗ್ಯ ಶಿಬಿರದ ಮುಖ್ಯ ಉದ್ದೇಶವೆನೆಂದರೆ ಮಂಗಳೂರಿಗೆ ಹೋಗಿ ಆರೋಗ್ಯ ತಪಾಸಣೆ ಮಾಡುವುದು ಕೆಲವರಿಗೆ ಅಸಾಧ್ಯ ಅಂತವರಿಗೆ ಈ ಶಿಬಿರವು ತುಂಬಾ ಸಹಕಾರಿಯಾಗುತ್ತದೆ. ಇಂತಹ ಉತ್ತಮ ಸಮಾಜಮುಖಿ ಕಾರ್ಯವನ್ನು ಮಾಡಿರುವ […]

ಕೇರ್ ಇನ್ಸೂರೆನ್ಸ್ ಕಂಪೆನಿಯ ಅಂತಾರಾಷ್ಟಿçÃಯ ಸಮ್ಮೇಳನವು ನೆದರ್‌ಲ್ಯಾಂಡನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಕೇರ್ ಇನ್ಸೂರೆನ್ಸ್ ಕಂಪೆನಿಯ ರಿಟೇಲ್ ಬಿಸಿನೆಸ್‌ನಲ್ಲಿ ರಾಷ್ಟçಮಟ್ಟದಲ್ಲಿ ಗುರುತಿಸಿದ ಹಾಗೂ ಆರೋಗ್ಯ ವಿಮಾ ಯೋಜನೆಯ ಗುರಿ ಮೀರಿದ ಸಾಧನೆಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರಿಗೆ ಕೇರ್ ಇನ್ಸೂರೆನ್ಸ್ ಕಂಪೆನಿಯ ರಾಷ್ಟಿçÃಯ ಮುಖ್ಯಸ್ಥರಾದ ಶ್ರೀ ಶರ್ಮಿಲ್ ಮೋದಿರವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೇರ್ ಇನ್ಸೂರೆನ್ಸ್ ಕಂಪೆನಿಯ ವಲಯ ಮುಖ್ಯಸ್ಥರಾದ ಶ್ರೀ ಜಗದೇವ್ ಸಿಂಗ್, ಶ್ರೀ ಹರಿಂದಾಮ್ ಸಿನ್ಹ ಮತ್ತಿತ್ತರರು ಉಪಸ್ಥಿತರಿದ್ದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಸೇವೆಯ ಜೊತೆಗೆ ಆರೋಗ್ಯ ಪೂರ್ಣ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. ಸಂಘದ ಎಲ್ಲಾ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಿದ್ದು ಸಂಘವು ಈಗಾಗಲೇ ಒಟ್ಟು ೬೩ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು, ಈ ಶಿಬಿರಗಳಲ್ಲಿ ಕಡುಬಡವರಿಗೆ ಉಚಿತ ಔಷದಿ ವಿತರಣೆ, ಆರೋಗ್ಯ ತಪಾಸಣೆ, ದಂತ ತಪಾಸಣೆ ಮತ್ತು ಚಿಕಿತ್ಸೆ, ಉಚಿತ ಆರೋಗ್ಯ ಕಾರ್ಡ್ ವಿತರಣೆ, ೪೦೦ಕ್ಕೂ ಮಿಕ್ಕಿ ಕಣ್ಣಿನ ಶಸ್ತçಚಿಕಿತ್ಸೆ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಮಂಗಳೂರು ಇದರ ಪುತ್ತೂರು ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪೆತ್ರೆ , ದೇರಳಕಟ್ಟೆ ಇವರ ನುರಿತ ವೈದರ ತಂಡದವರಿAದ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತಾ ಚಿಕಿತ್ಸಾ ಶಿಬಿರ ಹಾಗೂ ಭಾರತಿಯ ಅಂಚೆ ಇಲಾಖೆ- ಪುತ್ತೂರು ವಿಭಾಗದಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವು ಪುತ್ತೂರಿನ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಸಭಾಂಗಣದಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಕೆ. ಎಸ್. ಆರ್. ಟಿ. ಸಿ. ಡಿಪ್ಪೋ ಇದರ ಹಿರಿಯ ಮ್ಯಾನೇಜರ್ ಆಗಿರುವ ಶ್ರೀ ಇಸ್ಮಾಯಿಲ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ವ್ಯವಹಾರದ ಜೊತೆಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಕಾಳಜಿ ವಹಿಸಿ ಇಂತಹ ಶಿಬಿರಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ, ಇಂತಹ ಸಮಾಜಪರ ಕಾರ್ಯಕ್ರಮಕ್ಕೆ ಕೆ. ಎಸ್. ಆರ್. ಟಿ. ಸಿ. ನಿಲ್ದಾಣವನ್ನು ಉಚಿತವಾಗಿ ನೀಡಿ ನಮ್ಮ ಸಹಕಾರವನ್ನು ನೀಡಿರುತ್ತೇವೆ ಎಂದು ತಿಳಿಸಿದರು. […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಮಂಗಳೂರು ಇದರ ಸ್ಥಾಪನಾ ದಿನಾಚರಣೆ ಪ್ರಯುಕ್ತ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಜಪ್ಪಿನಮೊಗರು ಇದರ ಗುರುಮಂದಿರದ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ , ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ದೇರಳಕಟ್ಟೆ ಹಾಗೂ ಶ್ರೀನಿವಾಸ ಇನ್ಸ್ಟ್ಯೂಟ್ ಆಫ್ ಡೆಂಟಲ್ ಸಾಯನ್ಸ್, ಮುಕ್ಕ ಇವರ ನುರಿತ ತಜ್ಞ ವೈದ್ಯ ತಂಡದವರಿAದ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ತಪಾಸಣಾ ಶಿಬಿರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ). ಸಿ.ಎಸ್.ಸಿ ಮಂಗಳೂರು ಇದರ ವತಿಯಿಂದ ವಿಶ್ವಕರ್ಮ, ಆಯುಷ್ಮಾನ್ ಭಾರತ್, ಇಶ್ರಮ್ ಕಾರ್ಡ್ ಉಚಿತ ನೋಂದಣಿ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಜಪ್ಪಿನಮೊಗರು ಇಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಜಪ್ಪಿನಮೊಗರುವಿನ ಉದ್ಯಮಿಗಳಾದ ಶ್ರೀ ಲಕ್ಷಿ÷್ಮÃನಾರಾಯಣ ಕಂರ್ಬಿಸ್ಥಾನ ಇವರು ಉದ್ಘಾಟಿಸಿ , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಕಾಳಜಿ ಮಾಡುತ್ತಿರುವುದು ಪ್ರಶಂಸನೀಯ ಎಂದರು. ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರ ನೇತ್ರತ್ವದಲ್ಲಿ ತುಂಬಾ ಒಳ್ಳೆಯ ಸೇವೆಯನ್ನು ನೀಡುತ್ತಿದೆ ಹಾಗೂ ಮುಂದಕ್ಕೂ ಜನರಿಗೆ ಉತ್ತಮ ಸೇವೆಯನ್ನು ನೀಡುವಂತೆ ಭಗವಂತನು ಸೌಭಾಗ್ಯವನ್ನು ನೀಡಲೆಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಸ್ಥಾಪನಾ ದಿನಾಚರಣೆ, ಹವಾ ನಿಯಂತ್ರಿತ ಸಭಾಂಗಣ ಮತ್ತು ನೂತನ ಸೌರ ವಿದ್ಯುತ್ ಘಟಕ ಉದ್ಘಾಟನಾ ಸಮಾರಂಭವು ‘ಆತ್ಮಶಕ್ತಿ ಸೌಧ’ ಸಭಾಂಗಣ, ಪಡೀಲ್‌ನಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ರಮಾನಾಥ್ ರೈರವರು ನೂತನ ಸೌರ ವಿದ್ಯುತ್ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಹೆಚ್ಚಿನ ಸಹಕಾರಿ ಸಂಘಗಳು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ ಹಾಗೂ ರಾಷ್ಟೀಕೃತ ಬ್ಯಾಂಕುಗಳು ನೀಡುವ ಸೇವೆಗಿಂತ ಹೆಚ್ಚಿನ ಸೇವೆಯನ್ನು ನೀಡುತ್ತಿದೆ. ಅಲ್ಪವಧಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಯು ಅಪಾರವಾದದ್ದು, ಈ ಸಂಘವು ಮಹಿಳಾ ಸಬಲೀಕರಣಕ್ಕೆ ತುಂಬಾ ಒತ್ತು ನೀಡುತ್ತಿದೆ ಹಾಗೂ ಜನರ ವಿಶ್ವಾಸ ಗಳಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಹವಾ ನಿಯಂತ್ರಿತ ಸಭಾಂಗಣವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ ಕಾಮತ್‌ರವರು ಉದ್ಘಾಟಿಸಿ ಮಾತನಾಡಿ ಸಂಘದ ಸಭಾಂಗಣವು ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದ ಬಡ ಜನರಿಗೆ ಅವಕಾಶ ಕಲ್ಪಿಸಿಕೊಡುವಂತಾಗಲಿ. ಹೆಚ್ಚಿನ ರಾಷ್ಟಿçÃಕೃತ ಬ್ಯಾಂಕುಗಳು ಪ್ರಾರಂಭವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಕ್ಷೇತ್ರದಲ್ಲಿ ತುಳುನಾಡಿನಲ್ಲಿ ನೀಡಿದ ಕೊಡುಗೆ ಅಪಾರವಾದದ್ದು, ಮುಂದಿನ ದಿನಗಳಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಎಲ್ಲಾ ಶಾಖೆಗಳು ಸ್ವಂತ ಕಟ್ಟಡ ಹೊಂದಲಿ. […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ‘ಆತ್ಮಶಕ್ತಿ ಸೌಧ’ ಸಭಾಂಗಣ, ಪಡೀಲ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಸಂಘದಲ್ಲಿ ಸೇವೆ ಸಲ್ಲಿಸಿರುತ್ತಿರುವ ಪಿಗ್ಮಿ ಸಂಗ್ರಾಹಕರಿಗೆ ಉಚಿತ ಆರೋಗ್ಯ ವಿಮಾ ಕಾರ್ಡ್ ಅನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ ಕಾಮತ್‌ರವರು ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘದ ಬೆಳವಣಿಗೆಗೆ ಸಹಕಾರ ನೀಡಿದ ಸರ್ವರನ್ನು ಅಭಿನಂದಿಸಿ, ಸಂಘದ ಪಿಗ್ಮಿ ಸಂಗ್ರಹಕಾರರು ಸಂಘದ ಅಡಿಪಾಯವಾಗಿದ್ದು, ಸಂಘದಲ್ಲಿ ೧೦೦ಕ್ಕೂ ಅಧಿಕ ಪಿಗ್ಮಿ ಸಂಗ್ರಾಹಕರು ಸೇವೆ ಸಲ್ಲಿಸುತ್ತಿದ್ದು, ಅವರ ಆರೋಗ್ಯದ ಕಾಳಜಿಯಿಂದ ಉಚಿತ ಆರೋಗ್ಯ ವಿಮೆಯನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಂಘದಲ್ಲಿ ೨ ವರ್ಷಕ್ಕೂ ಅಧಿಕ ಸೇವೆ ಸಲ್ಲಿಸುತ್ತಿರುವ ಪಿಗ್ಮಿ ಸಂಗ್ರಾಹಕರಿಗೆ ಸಂಘದ ವತಿಯಿಂದ ಉಚಿತ ಆರೋಗ್ಯ ವಿಮಾ ಕಾರ್ಡ್ ಅನ್ನು […]

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಮಂಗಳೂರು ಇವರ ಸಹಯೋಗದೊಂದಿಗೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ,ಚಿಕ್ಕಮಗಳೂರು ,ಉಡುಪಿ,ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಂಗಣ “ಆತ್ಮಶಕ್ತಿ ಸೌಧ”, ಪಡೀಲ್ ಮಂಗಳೂರು ಇಲ್ಲಿ ನಡೆಸಲಾಯಿತು.

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ. ಹರೀಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ಸಹಕಾರ ಕ್ಷೇತ್ರದಲ್ಲಿ ಸಂಘಗಳ ಪ್ರಗತಿಗೆ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಕೊಡುಗೆ ಅಪಾರವಾದುದ್ದು, ಸಾಲ ವಸೂಲಾತಿಯಲ್ಲಿ ಮುಂಚೂಣಿಯಲ್ಲಿದ್ದರೆ ಮಾತ್ರ ಸಂಘ ಲಾಭದಾಯಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಇಂತಹ ಕಾರ್ಯಗಾರವನ್ನು ಆಯೋಜಿಸಿದ್ದಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಲಾಲ್‌ಬಾಗ್ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಕುದ್ರೋಳಿ ಯುವಕ ಸಂಘ (ರಿ.) ಕುದ್ರೋಳಿ ಮಂಗಳೂರು ಇವರ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಇವರ ನುರಿತ ವೈದ್ಯರ ತಂಡದೊAದಿಗೆ ಉಚಿತ ನೇತ್ರಾ ತಪಾಸಣಾ ಶಿಬಿರವು ದಿನಾಂಕ ೨೦-೦೧-೨೦೨೪ ರ ಆದಿತ್ಯವಾರದಂದು ಕುದ್ರೋಳಿ ಯುವಕ ಸಂಘದ ಕಟ್ಟಡದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಸಿವಿಲ್ ಇಂಜಿನಿಯರ್ ಆದ ಶ್ರೀಯುತ ನಿತಿನ್ ಭಟ್ ಇವರು ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಸೇವೆಯ ಜೊತೆಯಲ್ಲಿ ಆರೋಗ್ಯದ ಕಾಳಜಿಂiÀನ್ನು ವಹಿಸುವುದು ತುಂಬಾ ಉತ್ತಮ. ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೆ ಗಮನ ಕೊಡದೆ ಇರುವುದು ಹಲವು ರೋಗಗಳಿಗೆ ಕಾರಣವಾಗಿದೆ. ನಾವು ನಮ್ಮ ಆರೋಗ್ಯದ ನಿರ್ವಹಣೆಯತ್ತ ತುಸು ಸಮಯವನ್ನು ಮೀಸಲಿಡುವುದು ತುಂಬಾ ಅಗತ್ಯ. ಇದರಿಂದಾಗಿ ನಾವು ಆರೋಗ್ಯದಿಂದಿರಲು ತುಂಬಾ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಮಾತನಾಡಿ ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘವು ಈಗಾಗಲೇ ಒಟ್ಟು ೫೯ ಶಿಬಿರವನ್ನು ಆಯೋಜಿಸಿದ್ದು , ೬೦ನೇ ಶಿಬಿರವು ಇದಾಗಿದೆ ಎಂದರು. ಕೇವಲ ಶಿಬಿರವನ್ನು ಮಾತ್ರವಲ್ಲದೆ ಶಿಬಿರಾರ್ಥಿಗಳಿಗೆ ಕೂಡಾ ಅಗತ್ಯ ಸಂದರ್ಭದಲ್ಲಿ ವಿವಿಧ ಸೌಲಭ್ಯಗಳನ್ನು ನೀಡಿ ಈಗಾಗಲೇ ೨೨ ಸಾವಿರಕ್ಕೂ ಮಿಕ್ಕಿ ಜನರು ಶಿಬಿರದ ಪ್ರಯೋಜನೆ ಪಡೆಯುವುದರ ಜೊತೆಯಲ್ಲಿ ಕಣ್ಣಿನ ಪೊರೆಯ ಚಿಕಿತ್ಸೆಯನ್ನು ೪೩೫ಕ್ಕೂ ಹೆಚ್ಚು […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಮಂಗಳೂರು ಇದರ ಮಡಂತ್ಯಾರು ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ) ಮಡವು, ಜೆಸಿಐ ಮಡಂತ್ಯಾರು, ರೋಟರಿ ಕ್ಲಬ್ ಮಡಂತ್ಯಾರು, ಇವರ ಜಂಟಿ ಸಹಯೋಗದೊಂದಿಗೆ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ವೈದರ ತಂಡದವರಿAದ ಉಚಿತ ಬೃಹತ್ ವೈದ್ಯಕೀಯ, ಕ್ಯಾನ್ಸರ್ ತಪಾಸಣೆ ಮತ್ತು ದಂತಾ ಚಿಕಿತ್ಸಾ ಶಿಬಿರ ಹಾಗೂ ಭಾರತಿಯ ಅಂಚೆ ಇಲಾಖೆ- ಪುತ್ತೂರು ವಿಭಾಗದ ಸಹಯೋಗದೊಂದಿಗೆ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವು ದಿನಾಂಕ ೧೩.೦೧.೨೦೨೪ರ ಶನಿವಾರದಂದು ಶ್ರೀ ದುರ್ಗಾ ಕಾಂಪ್ಲೆûûಕ್ಸ್ (ಆಶೀರ್ವಾದ್ ಸಭಾಂಗಣ) ಮಡಂತ್ಯಾರು ಇಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಡಾ|| ಅಶಿತ್ ಪ್ರೊಫೆಸರ್, ಡಿಪಾರ್ಟ್ಮೆಂಟ್ ಆಫ್ ಒರ್ಥೊಡೊಂಟಿಸ್ಟ್ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇವರು ಉದ್ಘಾಟಿಸಿ , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ವ್ಯವಹಾರದ ಜೊತೆಗೆ ಸಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಜನರ ಕಾಳಜಿ ಮಾಡುತ್ತಿರುವುದು ಸಂಘದ ಉನ್ನತಿಗೆ ಮುಖ್ಯವಾದ ಕಾರಣ ಎಂದರು. ಸಮಾಜದ ಜನರು ಯಾವುದೇ ರೋಗ ಬರುವವರೆಗೆ ಕಾಯಬಾರದು ಅದಕ್ಕೂ ಮುನ್ನ ಖಾಯಿಲೆಯ ಬಗ್ಗೆ ಮುನ್ನೆಚ್ಚರಿಗೆ ವಹಿಸಿ ಇಂತಹ ಶಿಬಿರದ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪುತ್ತೂರು ಶಾಖೆಯ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶ್ರೀ ಎಸ್ ರಾಧಕೃಷ್ಣಾ ನಾಯಕ್, ಶ್ರೀ ವಸಂತ ಬಿ ಪೂಜಾರಿ, ಶ್ರೀ ಎನ್ ಗೋಪಾಲಕೃಷ್ಣಾ ಆಚಾರ್, ಶ್ರೀ ಚಿದಾನಂದ ಬೈಲಾಡಿ ಇವರುಗಳು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಟಾಟಿಸಿದರು.

ಸಂಘದ ಸದಸ್ಯರಾದ ಶ್ರೀ ಎನ್ ಗೋಪಾಲಕೃಷ್ಣಾ ಆಚಾರ್ ರವರು ಮಾತನಾಡಿ ಸಂಘದ ಗ್ರಾಹಕರ ಸಭೆಗೆ ಶುಭವನ್ನು ಹಾರೈಸಿ ಸಂಘವು ಕಡಿಮೆ ಅವಧಿಯಲ್ಲಿ ಹೆಚ್ಚು ಶಾಖೆಯನ್ನು ಹೊಂದಿದ್ದು ಇದು ಅಧ್ಯಕ್ಷರ, ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಶ್ರಮ ಮತ್ತು ಸಾಮರ್ಥ್ಯದಿಂದ ಸಾಧ್ಯವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾರ್ವಜನಿಕ ಸೇವೆ ನೀಡಿ ಸಂಘವು ಹೆಚ್ಚು ಬೆಳವಣಿಗೆ ಹೊಂದಲಿ ಎಂದು ಸಂಘಕ್ಕೆ ಶುಭ ಹಾರೈಸಿದರು. ಸಂಘದ ಸದಸ್ಯರಾದ ಶ್ರೀ ಎಸ್ ರಾಧಕೃಷ್ಣಾ ನಾಯಕ್ ರವರು ಮಾತನಾಡಿ, ಶಾಖೆಯು ಐದು […]