ಸಂಘದ ಸದಸ್ಯರಾದ ಶ್ರೀ ಮಾಧವ ಸನಿಲ್‌ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತಪಡಿಸಿ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಪ್ರಶಂಶಿಸಿದರು. ಸಂಘವು ಇನ್ನೂ ಮುಂದೆಯೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸದಸ್ಯರಾದ ಶ್ರೀ ಹರೀಶ್ಚಂದ್ರ ಪಿ ಸಾಲ್ಯಾನ್ ರವರು ಮಾತಾನಾಡಿ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪಡೆದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಹಾಗೂ 11 ವರ್ಷದಿಂದ ಸಂಘವು ಮಾಡಿದ […]
Author: athmashakthi society
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಆರೋಗ್ಯ ಮಾಹಿತಿ ತರಬೇತಿ ಕಾರ್ಯಗಾರವನ್ನು ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ವತಿಯಿಂದ ದಿನಾಂಕ 28.10.2023 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ನಡೆಸಲಾಯಿತು.
ಈ ತರಬೇತಿ ಕಾರ್ಯಾಗಾರವನ್ನು ಶಿರ್ಡಿ ಸಾಯಿ ಡೆವಲಪರ್ಸ್ ಬೆಂಗಳೂರು ಇದರ ಮಾಲಕರಾದ ಶ್ರೀ ಎನ್. ಟಿ ಸಾಗರ್ ರವರು ಉದ್ಘಾಟನೆ ಮಾಡಿ, ಮಾತಾಡಿದ ಅವರು ಸಿಬ್ಬಂದಿ ತರಬೇತಿ ಅನ್ನುವುದು ಇಂದಿನ ಕಾಲದ ಬಹು ಅಗತ್ಯದ ಸಂಗತಿ , ಅದರಲ್ಲೂ ಅತೀವ ಒತ್ತಡದ ಕೆಲಸ ಮಾಡುವ ಬ್ಯಾಂಕಿAಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಮಾಡುವುದು ಅವರ ಮಾನಸಿಕ ಸ್ಥಿರತೆಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿ ಆಗಲಿದೆ. ಜಿಲ್ಲೆಯ ಅತ್ಯಂತ ಶ್ರೇಷ್ಟ ಸಹಕಾರಿ ಸಂಸ್ಥೆ ಆದ ಆತ್ಮಶಕ್ತಿ ವಿವಿಧೋದ್ದೇಶ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‌ಬ್ಯಾಂಕ್ ಶಾಖೆಯ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸ್ಟೇಟ್‌ಬ್ಯಾಂಕ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ರಂಜಿತ್ ಮೈರಾ, ಶ್ರೀ ಶ್ರೀಧರ್ ಪೂಜಾರಿ ಹಾಗೂ ಶ್ರೀ ಚಂದ್ರಹಾಸ್ ಕೊಟ್ಟಾರಿ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.
ಸಂಘದ ಸದಸ್ಯರಾದ ಶ್ರೀ ರಾಮಕೃಷ್ಣ ಜಿ. ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತ ಪಡಿಸಿದರು. ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ವಿಶಾಲ ಹೃದಯ ಮನೋಭಾವವನ್ನು ಪ್ರಶಂಶಿಸಿದರು. ಗ್ರಾಹಕರಾದ ಶ್ರೀ ಕೆ ಅಣ್ಣು ಪೈ ರವರು ಮಾತನಾಡಿ ಈಗಾಗಲೇ ಸಂಘವು ಪಿಗ್ಮಿಯನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸಿತ್ತಿದ್ದು,ಇನ್ನು ಮುಂದಕ್ಕೆ ಸಾಲಗಳ ಮರುಪಾವತಿ ಹಾಗೂ ಇತರ ಯಾವುದೇ ಖಾತೆಗೆ ಹಣವನ್ನು ಜಮೆಮಾಡುವ ವಿಶಿಷ್ಟ ರೀತೀಯ ಯೋಜನೆಗಳನ್ನು ರೂಪಿಸಿ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು. […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮುಡಿಪು ಶಾಖೆಯ ೭ನೇ ವಾರ್ಷಿಕೋತ್ಸದ ಪ್ರಯುಕ್ತ 55ನೇ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರವು ಕಟ್ಟೆ ಪ್ರೆಂಡ್ಸ್ (ರಿ) ಮುಡಿಪು, ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ) ಬಾಳೆಪುಣಿ, ಲಯನ್ಸ್ ಮತ್ತು ಲಿಯೋ ಕ್ಲಬ್, ಮಂಗಳೂರು , ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ , ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ , ದೇರಳಕಟ್ಟೆ ಇಲ್ಲಿಯ ನುರಿತ ತಜ್ಞ ವೈದ್ಯ ತಂಡದವರಿoದ ದಿನಾಂಕ 14.10.2023 ರಂದು ಗೋಪಾಲಕೃಷ್ಣ ಸಭಾಗೃಹ ಮುಡಿಪು ಇಲ್ಲಿ ಜರುಗಿತು. ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಿ ರವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.
ಆರೋಗ್ಯ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಚಿತ್ತರಂಜನ್ ಬೋಳಾರ್ ರವರು ಮಾತಾಡಿ ಶಿಬಿರಕ್ಕೆ ಸಹಕರಿಸಿದ ಕಟ್ಟೆ ಪ್ರೆಂಡ್ಸ್ (ರಿ) ಮುಡಿಪು, ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ) ಬಾಳೆಪುಣಿ, ಲಯನ್ಸ್ ಮತ್ತು ಲಿಯೋ ಕ್ಲಬ್, ಮಂಗಳೂರು ,ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ , ದೇರಳಕಟ್ಟೆ ಅಭಿನಂದನೆ ಹಾಗೂ ಧನ್ಯವಾದವನ್ನು ಸಲ್ಲಿಸಿದರು ನಂತರ ಮಾತಾನಾಡಿ ಸಂಘವು ಕೇವಲ ಶಿಬಿರ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಾಟೆಕಲ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಹಾಗೂ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ, ಶ್ರೀ ಆನಂದ ಕೆ ಹಾಗೂ ಶ್ರೀ ಅಬ್ಬಾಸ್ ಎಮ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ನಾಟೆಕಲ್ ಶಾಖೆಯು ವ್ಯವಸ್ಥಿತವಾಗಿ ರೂಪಿಸಲು ಹಾಗೂ ಹೆಚ್ಚಿನ ಪ್ರಗತಿ ಹೊಂದಲು ನಾಟೆಕಲ್ ಪರಿಸರದವರ ಸಹಕಾರವೇ ಕಾರಣ. ಗ್ರಾಹಕರು ಒಳ್ಳೆಯ ವ್ಯವಹಾರವನ್ನು ನೀಡುತ್ತಿದ್ದು ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವುದರ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮುಡಿಪು ಪರಿಸರದಲ್ಲೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಹಾಗೂ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗಂಜಿಮಠ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಗಂಜಿಮಠ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಕೃಷ್ಣ ಕೆ. ಅಮೀನ್, ಕೆ.ನಾರಾಯಣ ಕಾರಂತ್ , ಶ್ರೀ ಸೋಹನ್ ಅತಿಕಾರಿ, ಶ್ರೀ ದಯಾನಂದ್, ಶ್ರೀ ಸುನೀಲ್ ಮನೋಜ್ ಫೆರ್ನಾಂಡಿಸ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಯೊoದಿಗೆ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಗ್ರಾಹಕರ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವು ಸಂಘವು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಸಂಘವು ಇ-ಸ್ಟಾಂಪಿAಗ್ ಸೇವೆಗೆ ಕಳೆದ 9 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿಯನ್ನು ಪಡೆಯುದರೊಂದಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದುಕೊಂಡ ಹೆಮ್ಮೆ ನಮ್ಮದಾಗಿದೆ. ಇ–ಸ್ಟಾಂಪಿoಗ್ ಸೇವೆಯು ಬೆಳಿಗ್ಗೆ 9 ಗಂಟೆಯಿoದ ಸಂಜೆ 6 […]
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ( ನಿ.) ಬೆಂಗಳೂರು ಇದರ ೧೯ ನೇ ವಾರ್ಷಿಕ ಸಾಮಾನ್ಯ ಸಭೆಯು ಕೆ.ಇ.ಬಿ ಇಂಜಿನಿಯರ್ಸ್,ಸರ್.ಎ ವಿಶ್ವೇಶ್ವರಯ್ಯ ಸಭಾಂಗಣ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಬೆಂಗಳೂರಿನಲ್ಲಿ ಮಹಾಮಂಡಳದ ಅಧ್ಯರಾದ ಆದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಾಮಾನ್ಯ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಹಾಗೂ ಇ-ಸ್ಟಾಂಪಿಗ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳಿಗೆ ಸನ್ಮಾನ ಸಮಾರಂಭವು ಜರುಗಿತು.
ಈ ಸಂದರ್ಭದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ “ಅತಿ ಹೆಚ್ಚು ಮೊತ್ತದ ಇ ಸ್ಟಾಂಪಿAಗ್ ಮುದ್ರಿಸಿರುವ ಸಂಘ ಎಂಬ ಪ್ರಶಂಸಾ ಪಲಕವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಹಾಗೂ ಮಹಾಮಂಡಳದ ನಿರ್ದೇಶಕರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ರವರಿಗೆ ಮಹಾಮಂಡಳದ ಅಧ್ಯಕ್ಷೆ ಆದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸನ್ಮಾನ ಸಮಾರಂಭದಲ್ಲಿ ಮಹಾಮಂಡಳ ಉಪಾಧ್ಯಕ್ಷರದ ಶ್ರೀ ಕೆ.ಕೆ ಮಹೇಂದ್ರ […]
ಕೊಪ್ಪಳ ಜಿಲ್ಲೆ ಕುಕನೂರಿನ ಕನ್ನಡ ಸಾಹಿತ್ಯ, ಅಭಿವೃದ್ಧಿ ಟ್ರಸ್ಟ್ ಹಾಗೂ ಮೈಸೂರಿನ ಚಿತ್ಕಲಾ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅಖಿಲ ಕರ್ನಾಟಕ ೫ನೇ ಸಾಂಸ್ಕೃತಿಕ ಸಮ್ಮೇಳನ ಹಾಗೂ ಸಾಹಿತ್ಯೋತ್ಸವ- 2023 ಎಂಬ ಕಾರ್ಯಕ್ರಮ ಸೆಪ್ಟೆಂಬರ್ 10 ರ ಭಾನುವಾರದಂದು ಮೈಸೂರಿನಲ್ಲಿ ನಡೆಯಿತು.
“ವಿಜಯನಗರದಿಂದ ಮೈಸೂರು ಕಡೆಗೆ ಒಂದು ಸಾಂಸ್ಕೃತಿಕ ಪಯಣ – ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ಕಾಯಕ್ರಮವು ಮೈಸೂರಿನ ಕುತ್ತೇತ್ತೂರು ಸೀತಾಮರಾವ್ ಭವನದಲ್ಲಿ ನಡೆಯಿತು. ಈ ಸಾಂಸ್ಕೃತಿಕ ಸಮ್ಮೇಳನ ಅಧ್ಯಕ್ಷರಾದ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಿರಿಯ ಸಾಹಿತಿಗಳಾದ ಡಾ.ಕೆ ಮಹಾದೇವ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪೂಜ್ಯ ಶ್ರೀ ಶಶಿಶೇಖರ ದೀಕ್ಷಿತ್ ರವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ಇವರಿಗೆ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ 2022-23 ನೇ ಸಾಲಿನ 12 ನೇ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 03.09.2023 ರ ಭಾನುವಾರ ಪೂರ್ವಾಹ್ನ ೧೦.೩೦ಕ್ಕೆ ಪಡೀಲಿನ ಬೈರಾಡಿಕೆರೆ ಹತ್ತಿರದ ಸಂಘದ ಪ್ರಧಾನ ಕಛೇರಿ “ಆತ್ಮಶಕ್ತಿ ಸೌಧ”ದ ಸಭಾಂಗಣದಲ್ಲಿ ಜರುಗಿತು.
ಸಂಘದ 2022-23ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್‌ರವರು ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘವು ಪ್ರಸ್ತುತ ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 30 ಶಾಖೆಗಳನ್ನು ಹೊಂದಿದ್ದು, 2023-24ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಹೊಸ ಶಾಖೆಗಳನ್ನು ತೆರೆದು, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ. 250 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ.200 ಕೋಟಿಗೂ ಮಿಕ್ಕಿ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಮಂಗಳೂರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 169 ನೇ ಜಯಂತಿಯ ಆಚರಣೆಯನ್ನು ಸಂಘದ ಪ್ರಧಾನ ಕಛೇರಿಯಲ್ಲಿ ದಿನಾಂಕ 31.08.2023 ರಂದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಮಹಿಳಾ ಸಿಬ್ಬಂದಿಗಳು ಭಜನೆ ಹಾಗೂ ಕುಣಿತ ಭಜನೆಯನ್ನು ಭಕ್ತಿಪೂರ್ವಕವಾಗಿ ನಡೆಸಿಕೊಟ್ಟರು. ಪುರೋಹಿತರಾದ ಶ್ರೀಯುತ ಮನೋಜ್ ಶಾಂತಿ ಇವರು ಗುರುಪೂಜೆ ನಡೆಸಿ ನಂತರ ಪ್ರಸಾದ ವಿತರಣೆಯನ್ನು ನಡೆಸಿದರು.
ಈ ಶುಭ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ , ನಿರ್ದೇಶಕರುಗಳಾದ ಶ್ರೀ ಜಿ. ಪರಮೇಶ್ವರ್ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ,ಶ್ರೀ ರಮಾನಾಥ್ ಸನಿಲ್,ಶ್ರೀ ಬಿ.ಪಿ ದಿವಾಕರ್,ಶ್ರೀ ಗೋಪಾಲ್ ಎಮ್,ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ವಾಮನ್ ಕೆ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಸಂಘದ ಸದಸ್ಯರುಗಳು ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.