ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೂರಿಂಜೆ ನಿರ್ದೇಶಕರುಗಳಾದ , ಶ್ರೀ ಟಿ.ಜಿ. ರಾಜಾರಾಮ ಭಟ್, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ಬಿ. ನಿರಂಜನ್,ಶ್ರೀ ಎಂ.ವಾದಿರಾಜ್ ಶೆಟ್ಟಿ, ಶ್ರೀ ಸದಾಶಿವ ಉಳ್ಳಾಲ್, ಶ್ರೀ ಎಸ್.ರಾಜು ಪೂಜಾರಿ, ಶ್ರೀ ಶಶಿಕುಮಾರ್ ರೈ ಬಿ., ಶ್ರೀ ರಾಜೇಶ್ ರಾವ್, ಶ್ರೀ ಎಸ್.ಬಿ.ಜಯರಾಮ ರೈ, ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಕೆ.ಜೈರಾಜ್ ಬಿ. ರೈ, , ಶ್ರೀ ಕೆ. […]
Category: All
ಸಾಮಾಜಿಕ ಕಾರ್ಯಗಳಲ್ಲಿ ಸತತವಾಗಿ 18 ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಸಹಾಯಕರಿಗೆ ಸಹಾಯಧನ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಕೊರೊನಾ ಮಹಾಮಾರಿಯಿಂದ ತೊಂದರೆಗೊಳಗಾಗಿ ಚಿಕತ್ಸೆ ಪಡೆಯುತ್ತಿರುವ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಸಹಾಯಧನ ನೀಡುವ ಕಾರ್ಯಕ್ರಮವು ನಡೆಯಿತು.
ಈ ಸಹಾಯಧನ ನೀಡಲು ಆರ್ಥಿಕ ಸಹಾಯ ನೀಡಿದ ಟ್ರಸ್ಟಿನ ಬಳಗದವರಾದ ಉದ್ಯಮಿ ಶ್ರೀ ಜಯಚಂದ್ರ ಕಜೆಕಾರ್ ಇವರಿಗೆ ದನ್ಯವಾದ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಯಮಿ ಸುರೇಶ್ ಕೆ.ಪಿ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ.ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಟ್ರಸ್ಟ್‍ನ ಕಾರ್ಯದರ್ಶಿ ಶ್ರೀ ಗೋಪಾಲ್ ಎಮ್. ಸ್ವಾಗತಿಸಿದರು. ಆತ್ಮಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಟ್ರಸ್ಟಿನ ಸ್ಥಾಪಕ ಸದಸ್ಯರಾದ ಶ್ರೀ ವಾಮನ್ ಕೆ. ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಆತ್ಮಶಕ್ತಿ ವಿವಿಧೋದ್ದೇಶ […]
ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು ಇವರಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬೆಂದೂರ್‍ವೆಲ್ ಮಂಗಳೂರು ಇವರ ಸಮನ್ವಯದಲ್ಲಿ ಮಂಗಳೂರು ಕೇಂದ್ರವಾಗಿಸಿಕೊಂಡು ಸಹಕಾರ ನಿರ್ವಹಣೆಯಲ್ಲಿ ಉನ್ನತ Diploma (ಹೆಚ್.ಡಿ.ಸಿ.ಎಮ್) ಕೋರ್ಸಿನ ದೂರ ಶಿಕ್ಷಣದ ಪರೀಕ್ಷೆಯಲ್ಲಿ ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಸಿಬ್ಬಂದಿ ಶ್ರೀ ಕೀರ್ತನ್ ಯು ಇವರು ಪ್ರಥಮ ಸ್ಥಾನ ,ಜಾಗೃತ ವಿವಿಧೋದ್ಧೇಶ ಸಹಕಾರಿ ಸಂಘದ ಸಿಬ್ಬಂದಿ ಶ್ರೀಮತಿ ಸುಕಲಾಕ್ಷಿ ರವರು ದ್ವಿತೀಯ ಸ್ಥಾನ ಹಾಗೂ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿ ಶ್ರೀ ಉದಯ್ ನಾಯ್ಕ್ ರವರು ತೃತೀಯ ಸ್ಥಾನ ಪಡೆದಿರುತ್ತಾರೆ.
ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯು ಸಹಕಾರಿ ಸಂಘದ ಸಿಬ್ಬಂದಿಗಳ ಪದೋನ್ನತಿಗಾಗಿ ಅವಶ್ಯವಿರುವ ಹೆಚ್‍ಡಿಸಿಎಮ್ ಕೋರ್ಸನ್ನು ದೂರಶಿಕ್ಷಣದ ಮೂಲಕ ನೀಡುತ್ತಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 65 ಶಿಕ್ಷಣಾರ್ಥಿಗಳು ಹೆಚ್‍ಡಿಸಿಎಮ್ 30ನೇ ಅಧಿವೇಶನದಲ್ಲಿ ಪರೀಕ್ಷೆ ಬರೆದಿರುತ್ತಾರೆ. ಪರೀಕ್ಷೆಗಳು ವಿಶ್ವವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ನಡೆದಿದ್ದು ಇದರಲ್ಲಿ 17 ಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು 28 ಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಅವಿಭಜಿತ ಜಿಲ್ಲೆಗಳಿಗೆ ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ತರಬೇತಿ ಸಮನ್ವಯ ಅಧಿಕಾರಿ ಹಾಗೂ ಉಪನ್ಯಾಸಕರಾದ ಶ್ರೀ ಸುರೇಶ್ […]
ಮಂಗಳೂರಿನ ಬೆಂದೂರ್‍ವೆಲ್‍ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯು ಪಂಜಿಮೊಗರು ಮೊಗೇರ ಸಂಘ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಸ್ಥಳಾಂತರ ಶಾಖೆಯನ್ನು ಉದ್ಘಾಟಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ವೈ. ಶೆಟ್ಟಿಯವರು ಮಾತನಾಡಿ, ಸಹಕಾರ ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಜನರಿಗೆ ಹೆಚ್ಚಿನ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುವುದರ ಮೂಲಕ ಜನರ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಡಿಮೆ ಅವಧಿಯಲ್ಲಿ ತನ್ನ 19 ಶಾಖೆಯನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಜನಮನ್ನಣೆ ಗಳಿಸಿದೆ. ಈ ಸಂಘವು ಇನ್ನಷ್ಟು ಉನ್ನತಿ ಪಡೆದು ನೂರಾರು ಶಾಖೆಗಳನ್ನು ತೆರೆದು ಜನಪ್ರಿಯಗೊಳ್ಳಲಿ […]
ಮಂಗಳೂರಿನ ಬೆಂದೂರ್‍ವೆಲ್‍ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 19ನೇ ತೊಕ್ಕೊಟ್ಟು ಶಾಖೆಯು ಗುರುವಾರ ತೊಕ್ಕೊಟ್ಟುವಿನ ಸನ್‍ಸಿಟಿ ಬಿಲ್ಡಿಂಗ್‍ನಲ್ಲಿ ಆರಂಭಗೊಂಡಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಇವರು ಉದ್ಘಾಟಿಸಿ ಮಾತನಾಡಿ, ಗ್ರಾಹಕರಿಗೆ ಬ್ಯಾಂಕಿನ ರೀತಿಯಲ್ಲಿ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಹಕಾರಿಯು ಕೇವಲ 10 ವರ್ಷಗಳಲ್ಲಿ 19 ಶಾಖೆಗಳನ್ನು ಸ್ಥಾಪನೆ ಮಾಡಿದ್ದು, 7 ಶಾಖೆಗಳನ್ನು ನನ್ನ ಕ್ಷೇತ್ರದಲ್ಲಿಯೇ ಉದ್ಘಾಟಿಸಿದ ಹೆಮ್ಮೆ ನನಗಿದೆ ಎಂದರು. ಸಂಘವು ಜನಸಾಮಾನ್ಯರಿಗೆ ಪ್ರೀತಿ ವಿಶ್ವಾಸದ ಸೇವೆಯನ್ನು ನೀಡುತ್ತಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು. ದೀಪ ಪ್ರಜ್ವಲನೆ ಮಾಡಿ ಚಿನ್ನದ ನೈಜತಾ ಪರೀಕ್ಷಾ ಯಂತ್ರವನ್ನು ಉದ್ಘಾಟಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇವರ ಸಮನ್ವಯದಲ್ಲಿ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (RICM) ಬೆಂಗಳೂರು ಇವರಿಂದ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮಾ (HDCM) ನ 30ನೇ ಅಧಿವೇಶನದ ಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟದಲ್ಲಿ ಇತ್ತೀಚಿಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಪ್ರಸ್ತುತ ಸಹಕಾರ ಕಾಯ್ದೆ ಮತ್ತು ನಿಯಮಗಳಲ್ಲಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿ ಹಾಗೂ ನೌಕರರನ್ನು ಉನ್ನತ ಹುದ್ದೆಗೆ ಪದೋನ್ನತಿ ಪಡೆಯಬೇಕಾದರೆ ಆತನ ಅರ್ಹತೆಯಲ್ಲಿ Higher Diploma in Co-Operative Management (HDCM) ಕೋರ್ಸ್‍ನ್ನು ಸರಕಾರವು ನಿಗದಿಪಡಿಸಿರುವುದರಿಂದ ಮುಂದಿನ ದಿನಗಳಲ್ಲಿ ಈ ಶಿಕ್ಷಣ ಅತೀ ಅಗತ್ಯವಿರುತ್ತದೆ. ಈ ಅಗತ್ಯತೆಯನ್ನು ಮನಗಂಡು ನಮ್ಮ ಸಂಘದ […]
ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘದ 18ನೇ ತುಂಬೆ ಶಾಖೆಯು ರವಿವಾರ ತುಂಬೆ ಬಸ್ ನಿಲ್ದಾಣದ ಬಳಿಯ ಕುಲ್ಶ್ ಸೆಂಟರ್ ನಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ಸಹಕಾರಿ ಸಂಘದ 5 ಶಾಖೆಗಳನ್ನು ನನ್ನ ಕ್ಷೇತ್ರದಲ್ಲಿಯೇ ಉದ್ಘಾಟಿಸಿದ ಹೆಮ್ಮೆ ನನಗಿದೆ. ಸಹಕಾರಿ ರಂಗದಲ್ಲಿ ಗ್ರಾಹಕರ ಕಾಳಜಿ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ. ಇದಕ್ಕೆ ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘವು ಉತ್ತಮ ನಿದರ್ಶನವಾಗಿದೆ. ಗ್ರಾಹಕರಿಗೆ ಬ್ಯಾಂಕಿನ ರೀತಿಯಲ್ಲಿ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಹಕಾರಿಯು ರಾಷ್ಟ್ರಮಟ್ಟದಲ್ಲಿ ಬೆಳುಗುವಂತಾಗಲಿ ಎಂದರು. ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ! ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ದೀಪ ಪ್ರಜ್ವಲನೆ ಮಾಡಿ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಜಪ್ಪಿನಮೊಗರು, ಮಂಗಳೂರು ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ , ಉಜ್ಜೋಡಿ, ಮಂಗಳೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಜಪ್ಪಿನಮೊಗರಿನಲ್ಲಿ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ Corporater ಆದ ಶ್ರೀಮತಿ ವೀಣಾ ಮಂಗಳ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಿರಂತರವಾಗಿ ಇಂತಹ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿದ್ದು ಈ ಸಂಘವು ಜನರಪರ ಕಾಳಜಿಯುಳ್ಳ ಒಂದು ಉತ್ತಮ ಸಹಕಾರಿ ಸಂಘವಾಗಿ ಸಮಾಜದಲ್ಲಿ ಒಂದು ಮಾದರಿ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘವು ಇಂತಹ ಶಿಬಿರವನ್ನು ಈ ಸಂಘವು ಆಯೋಜಿಸುವಂತಾಗಲಿ ಎಂದು ಶುಭ ಹಾರೈಸಿ ಪರಿಸರದ ಜನರು […]
ಕಳೆದ ಹದಿನೆಂಟು ವರುಷಗಳಿಂದ ಪ್ರಕಾಶನ, ಸಮಾಜ ಸೇವೆ, ಆರೋಗ್ಯ, ಶೈಕ್ಷಣಿಕ ಸಹಾಯ, ಆರ್ಥಿಕ ಕೊಡುಗೆಗಳ ಮೂಲಕ ತನ್ನ ಸೇವಾಕಾರ್ಯಗಳನ್ನು ಅನುಚಾನವಾಗಿ ನಡೆಸಿಕೊಂಡು ಸಮಾಜಮುಖಿ ಚಿಂತನೆಗಳಿಗೆ ಪ್ರೇರಣೆ ಮಾದರಿಯಾಗಿರುವ ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟ್ ರಿ. ಇದರ ವತಿಯಿಂದ ಆತ್ಮಶಕ್ತಿ ವಿವಿದ್ಧೋದ್ದೇಶ ಸಹಕಾರಿ ಸಂಘ ನಿ. ಇದರ ಸಹಕಾರದೊಂದಿಗೆ ಇತ್ತೀಚೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಭವನ, ಕೊಡಿಯಲ್ ಬೈಲ್ ಇಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಕಡು ಬಡತನದ ಅಸಹಾಯಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹಾಗೂ ಹೃದಯ ಸಂಬಂಧಿ ಅನಾರೋಗ್ಯ ಪೀಡಿತರಿಗೆ ಧನಸಹಾಯವನ್ನು ವಿತರಿಸಲಾಯಿತು.
ಆತ್ಮಶಕ್ತಿ ಪತ್ರಿಕೆಯ ಸಂಪಾದಕರು ಹಾಗೂ ಸ್ಥಾಪಕ ಟ್ರಸ್ಟಿಗಳೂ ಆದ ಶ್ರೀ ವಾಮನ್ ಕೆ. ಇವರು ಈ ಸಂದರ್ಭದಲ್ಲಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟಿನ ವತಿಯಿಂದ ಪ್ರತೀ ವರ್ಷ ಕಡೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ, ಪ್ರಸ್ತುತ ಕೊರೋನ ಸಂಕಷ್ಟ ಕಾಲದಲ್ಲಿ ಆರ್ಥಿಕ ಅಡಚಣೆಯಿಂದ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸಲು ಆಗದೆ ಮೊಟಕುಗೊಳಿಸಿರುವುದನ್ನು ಮನಗಂಡು ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕಾಲೇಜು ಶುಲ್ಕವನ್ನು ಭರಿಸುವುದರ ಮೂಲಕ ಹಾಗೂ ಅನಾರೋಗ್ಯ ಪೀಡಿತರಾದ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)ದ 2019-20ನೇ ಸಾಲಿನ 9ನೇ ವಾರ್ಷಿಕ ಸಾಮಾನ್ಯ ಸಭೆಯು ಘನವೆತ್ತ ಕರ್ನಾಟಕ ರಾಜ್ಯ ಸರಕಾರದ ಆಜ್ಞಾನು ಪ್ರಕಾರ ವೀಡಿಯೋ ಕಾನ್ಫರೆನ್ಸ್/ವರ್ಚುವಲ್ ಮುಖಾಂತರ ದಿನಾಂಕ 18-12-2020 ರ ಶುಕ್ರವಾರ ಪೂರ್ವಾಹ್ನ 9.30 ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ 2019-20 ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಸಂಘವು 2019-20 ನೇ ಸಾಲಿನಲ್ಲಿ 17 ಶಾಖೆಗಳನ್ನು ಹೊಂದಿದ್ದು, ತನ್ನ ಕಾರ್ಯವ್ಯಾಪ್ತಿಯನ್ನು ಉಡುಪಿ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಸಹಿತ 5 ಜಿಲ್ಲೆಗಳಿಗೆ ವ್ಯಾಪಿಸಿರುತ್ತದೆ . ಸಂಘವು 2020-21 ನೇ ಆರ್ಥಿಕ ಸಾಲಿನಲ್ಲಿ ಇಂದಿನವರೆಗೆ ರೂ. 120 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದ್ದು ಇದನ್ನು ಮಾರ್ಚ್ ಅಂತ್ಯಕ್ಕೆ ರೂ. 150 ಕೋಟಿ […]