ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಲಾಲ್‌ಭಾಗ್ ಶಾಖೆಯ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ’’ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಲಾಲ್‌ಭಾಗ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶ್ರೀ ಶಶಿಧರ್ ಹೆಗ್ಡೆ ಯವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಟಾಟಿಸಿದರು.

ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಮಾಜಿ ಮೇಯರ್ ಶ್ರೀ ಶಶಿಧರ್ ಹೆಗ್ಡೆ ರವರು ಮಾತಾನಾಡಿ ಆತ್ಮಶಕ್ತಿ ಸಹಕಾರಿ ಸಂಘವು ಕ್ರೀಯಾಶೀಲ ಅಧ್ಯಕ್ಷರು ಹಾಗೂ ಉತ್ತಮ ಆಡಳಿತ ಮಂಡಳಿ ನಿರ್ದೇಶಕರನ್ನು ಹೊಂದಿ ಬ್ಯಾಂಕಿOಗ್ ಕ್ಷೇತ್ರದಲ್ಲಿ ಇತಿಹಾಸವನ್ನು ಹೊಂದಿದೆ. ಜಗತ್ತಿನಲ್ಲೇ ಅನೇಕ ಸರಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಅವುಗಳಲ್ಲಿ ಆತ್ಮಶಕ್ತಿ ಸಂಘವು ಬೆಳೆದಿರುವುದು ತುಂಬಾ ಸಂತೋಷದ ವಿಷಯ . ಸಹಕಾರ ಕ್ಷೇತ್ರದಲ್ಲಿ ಈ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆರ್ಥಿಕತೆಯ ಜೊತೆಗೆ ಮಹಿಳೆಯರಿಗೆ ಉತ್ತಮ ಸ್ಥಾನಮಾನದೊಂದಿಗೆ ಸ್ವಾವಲಂಬಿಯಾಗುವ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ಕರ್ನಾಟಕ ಸರ್ಕಾರದ ಮಾಜಿ ಸಚಿವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ನಿ.) ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಜಿ.ಟಿ. ದೇವೇಗೌಡರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 30 ಶಾಖೆಗಳನ್ನು ಹೊಂದಿದ್ದು ಸಿಬ್ಬಂದಿಗಳು ಉತ್ತಮ ಸೇವೆ ಸಲ್ಲಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ. ಈ ಸಹಕಾರ ಸಂಸ್ಥೆಯು ಮಾದರಿ ಸಂಸ್ಥೆಯಾಗಿದ್ದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯವನ್ನು ಶ್ಲಾಘಿಸಿದರು. 70ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಶುಭವನ್ನು ಹಾರೈಸಿದರು. ಶ್ರೀಯುತರನ್ನು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಸಂಘದ ವತಿಯಿಂದ ಗೌರವಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಮಂಗಳೂರು ಇದರ ಪಂಜಿಮೊಗರು ಶಾಖೆಯ ೭ ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶಾರದೋತ್ಸವ ಸೇವಾ ಟ್ರಸ್ಟ್ö (ರಿ), ಹಿಂದೂ ಯುವಸೇನೆ ವಿದ್ಯಾನಗರ ಪಂಜಿಮೊಗರು, ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಎ. ಜೆ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಮಾತಾ ಅಮೃತಾನಂದಮಯಿ ಮಠ ಬೋಳೂರು,ಶ್ರೀನಿವಾಸ್ ಇನ್ಸ್ಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಮತ್ತು ಕಣಚ್ಚೂರು ಇನ್‌ಟ್ಯೂಟ್ ಆಫ್ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ನುರಿತ ವೈದ್ಯರ ತಂಡದವರಿAದ ಉಚಿತ ವೈದ್ಯಕೀಯ, ನೇತ್ರ ತಪಸಣಾ ಮತ್ತು ದಂತ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರವು ದಿನಾಂಕ 19.11.2023ರಂದು ಶ್ರೀ ಕೃಷ್ಣ ಭಜನಾ ಮಂದಿರದ ಅಂಗಣ ವಿದ್ಯಾನಗರ ಪಂಜಿಮೊಗರು ಇಲ್ಲಿನಡೆಯಿತು.

ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ಹಾಗೂ ಕಾವೂರು ವ್ಯವಸಾಯ ಸೇವ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷರಾದ ಶ್ರೀಯುತ ಶ್ರೀ ಹರಿಶ್ಚಂದ್ರ ಇವರು ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸ್ಥಳೀಯವಾಗಿ ಉತ್ತಮ ಜನಪರ ಸೇವೆ ಒದಗಿಸುತ್ತಿದ್ದು ,ಕಳೆದ ೫ ವರ್ಷಗಳಿಂದ ಕಾವೂರಿನಲ್ಲಿ ಆರೋಗ್ಯ ಶಿಬಿರವನ್ನು ನಡೆಸುತ್ತಿದ್ದು ಇದರಿಂದ ಸ್ಥಳೀಯ ಹಲವಾರು ಜನರು ಪ್ರಯೋಜನವನ್ನು ಪಡೆದಿರುತ್ತಾರೆ,ಇನ್ನೂ ಉತ್ತಮ ಸಮಾಜ ಮುಖಿ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮ.ನ.ಪಾ ಸದಸ್ಯರು […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಡೀಲ್ ಶಾಖೆಯಲ್ಲಿ ಸಹಕಾರಿ ಸಪ್ತಾಹದ ಅಂಗವಾಗಿ ಮಕ್ಕಳಿಗಾಗಿ ಆತ್ಮಶಕ್ತಿ ಭವಿಷ್ಯ ಸುರಕ್ಷಾ ಯೋಜನೆ ಹಾಗೂ 555 ದಿವಸಗಳ ಠೇವಣಿ ಮೇಲೆ 9.70 ವರೆಗೆ ಆಕರ್ಷಕ ಬಡ್ಡಿ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಸಂಘದ ಸದಸ್ಯರಾದ ಶ್ರೀಮತಿ ಪ್ರಮೀಳಾ.ಪಿ ಹಾಗೂ ಶ್ರೀಮತಿ ಶ್ವೇತಾ ರವರಿಗೆ ಈ ಯೋಜನೆಯ ಠೇವಣಿ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಸಹಾಯಕ ಪ್ರಬಂಧಕರಾದ ಶ್ರೀ ವಿಶ್ವನಾಥ, ಪಡೀಲ್ ಶಾಖೆಯ ಶಾಖಾಧಿಕಾರಿ ಶ್ರೀ ಸಚಿನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘವು ಈ ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಸಂಘದ ಎಲ್ಲಾ ಶಾಖೆಗಳಲ್ಲಿ ಪಡೆಯುವಂತೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ತಿಳಿಸಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ಆತ್ಮಶಕ್ತಿ ಸೌಧದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ,ನಿರ್ದೇಶಕರಾದ ಶ್ರೀ ಗೋಪಾಲ್ ಎಮ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್,ಬಿಲ್ಲವ ಸಂಘ ಮಂಗಳಾದೇವಿ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಪೂಜಾರಿ ಎಮ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಸಂಘದ ಗ್ರಾಹಕರಿಗೆ ಠೇವಣಿಗಳ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಿಸಿದರು. ಆತ್ಮವಿಶ್ವಾಸ ಮಕ್ಕಳ ವಿಶೇಷ ಠೇವಣಿ ಯೋಜನೆ ಹಾಗೂ ೫೫೫ ದಿವಸಗಳ ಠೇವಣಿ ಮೇಲೆ ೯.೭೦% ರ ವರೆಗೆ ಆಕರ್ಷಕ ಬಡ್ಡಿ ಕೊಡುಗೆಯನ್ನು ನೀಡುವುದಾಗಿ ತಿಳಿಸಿದರು.

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕರಾದ ಶ್ರೀ ಪ್ರವೀಣ್ ಚಂದ್ರ ಆಳ್ವ ರವರನ್ನು ಸಂಘದ ಪರವಾಗಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ನಿರ್ದೇಶಕರಾದ ಶ್ರೀ ಜಿ.ಪರಮೇಶ್ವರ ಪೂಜಾರಿ sಶ್ರೀ ಆನಂದ್ ಎಸ್ ಕೊಂಡಾಣ, ಶ್ರೀ ಸೀತಾರಾಮ್ ಎನ್, ,ಶ್ರೀ ಚಂದ್ರಹಾಸ್ ಮರೋಳಿ, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ಬಿ.ಪಿ. ದಿವಾಕರ್, ಶ್ರೀ ಗೋಪಾಲ್ ಎಮ್, ಶ್ರೀಮತಿ ಉಮಾವತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ಉಪಸ್ಥಿತರಿದ್ದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸುರತ್ಕಲ್ ಶಾಖೆಯ ಹನ್ನೊಂದನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಮಾಧವ ಎಮ್ ಅಂಚನ್, ಶ್ರೀ ರಾಘವೇಂದ್ರ ಟಿ.ಎನ್ ಹಾಗೂ ಶ್ರೀಮತಿ ಪ್ರೇಮ ಅಮೀನ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಸಂಘದ ಸದಸ್ಯರಾದ ಶ್ರೀ ಕುಳಾಯಿ ಗಿರಿಯಪ್ಪ ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತ ಪಡಿಸಿದರು. ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಇ ಸ್ಟಾಂಪಿOಗ್ ಸೇವೆಯ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಗ್ರಾಹಕರಾದ ಶ್ರೀ ರಾಘವೆಂದ್ರ ಟಿ ಎನ್ ಮಾತನಾಡಿ ಆಯ್ದ ರಜಾ ದಿನಗಳಲ್ಲಿಯೂ ಕೂಡ ಇ ಸ್ಟಾಂಪಿOಗ್ ಸೇವೆಯನ್ನು ನೀಡುವುದರ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶ್ರೀ ಎಮ್ ಶಬ್ಬೀರ್ ಅಹಮದ್‌ರವರು ಮಾತಾನಾಡಿ ಸಂಘದಲ್ಲಿ ಲಭ್ಯವಿರುವ ಚಿನ್ನಾಭರಣ ಸಾಲದ ಕುರಿತು ಪ್ರಶಂಸಿದರು […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಲ್ಕಿ ಶಾಖೆಯ ಹನ್ನೊಂದನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮುಲ್ಕಿ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಹರೀಶ್ಚಂದ್ರ ಪಿ ಸಾಲ್ಯಾನ್, ಶ್ರೀ ಎಚ್ ಬಿ ತಾರನಾಥ್ ಹಾಗೂ ಶ್ರೀ ವಾಸು ಪೂಜಾರಿ ಎಚ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಸಂಘದ ಸದಸ್ಯರಾದ ಶ್ರೀ ಮಾಧವ ಸನಿಲ್‌ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತಪಡಿಸಿ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಪ್ರಶಂಶಿಸಿದರು. ಸಂಘವು ಇನ್ನೂ ಮುಂದೆಯೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸದಸ್ಯರಾದ ಶ್ರೀ ಹರೀಶ್ಚಂದ್ರ ಪಿ ಸಾಲ್ಯಾನ್ ರವರು ಮಾತಾನಾಡಿ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪಡೆದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಹಾಗೂ 11 ವರ್ಷದಿಂದ ಸಂಘವು ಮಾಡಿದ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಆರೋಗ್ಯ ಮಾಹಿತಿ ತರಬೇತಿ ಕಾರ್ಯಗಾರವನ್ನು ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ವತಿಯಿಂದ ದಿನಾಂಕ 28.10.2023 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ನಡೆಸಲಾಯಿತು.

ಈ ತರಬೇತಿ ಕಾರ್ಯಾಗಾರವನ್ನು ಶಿರ್ಡಿ ಸಾಯಿ ಡೆವಲಪರ್ಸ್ ಬೆಂಗಳೂರು ಇದರ ಮಾಲಕರಾದ ಶ್ರೀ ಎನ್. ಟಿ ಸಾಗರ್ ರವರು ಉದ್ಘಾಟನೆ ಮಾಡಿ, ಮಾತಾಡಿದ ಅವರು ಸಿಬ್ಬಂದಿ ತರಬೇತಿ ಅನ್ನುವುದು ಇಂದಿನ ಕಾಲದ ಬಹು ಅಗತ್ಯದ ಸಂಗತಿ , ಅದರಲ್ಲೂ ಅತೀವ ಒತ್ತಡದ ಕೆಲಸ ಮಾಡುವ ಬ್ಯಾಂಕಿAಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಮಾಡುವುದು ಅವರ ಮಾನಸಿಕ ಸ್ಥಿರತೆಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿ ಆಗಲಿದೆ. ಜಿಲ್ಲೆಯ ಅತ್ಯಂತ ಶ್ರೇಷ್ಟ ಸಹಕಾರಿ ಸಂಸ್ಥೆ ಆದ ಆತ್ಮಶಕ್ತಿ ವಿವಿಧೋದ್ದೇಶ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‌ಬ್ಯಾಂಕ್ ಶಾಖೆಯ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸ್ಟೇಟ್‌ಬ್ಯಾಂಕ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ರಂಜಿತ್ ಮೈರಾ, ಶ್ರೀ ಶ್ರೀಧರ್ ಪೂಜಾರಿ ಹಾಗೂ ಶ್ರೀ ಚಂದ್ರಹಾಸ್ ಕೊಟ್ಟಾರಿ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಸಂಘದ ಸದಸ್ಯರಾದ ಶ್ರೀ ರಾಮಕೃಷ್ಣ ಜಿ. ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತ ಪಡಿಸಿದರು. ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ವಿಶಾಲ ಹೃದಯ ಮನೋಭಾವವನ್ನು ಪ್ರಶಂಶಿಸಿದರು. ಗ್ರಾಹಕರಾದ ಶ್ರೀ ಕೆ ಅಣ್ಣು ಪೈ ರವರು ಮಾತನಾಡಿ ಈಗಾಗಲೇ ಸಂಘವು ಪಿಗ್ಮಿಯನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸಿತ್ತಿದ್ದು,ಇನ್ನು ಮುಂದಕ್ಕೆ ಸಾಲಗಳ ಮರುಪಾವತಿ ಹಾಗೂ ಇತರ ಯಾವುದೇ ಖಾತೆಗೆ ಹಣವನ್ನು ಜಮೆಮಾಡುವ ವಿಶಿಷ್ಟ ರೀತೀಯ ಯೋಜನೆಗಳನ್ನು ರೂಪಿಸಿ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು. […]