ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಸಣ್ಣ ಅವಧಿಯಲ್ಲಿ ಹಲವು ಶಾಖೆಗಳನ್ನು ಆರಂಭಿಸುವುದರ ಮೂಲಕ ದಾಖಲೆ ಮೆರೆದಿದೆ. ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪುರಸ್ಕಾರ ಪಡೆದುಕೊಂಡಿರುವ ಸಂಘ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಜನರಿಗೆ ಸಹಕಾರ ಆಗುವ ರೀತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಗೊಳ್ಳಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಅಭಿಪ್ರಾಯ ಪಟ್ಟರು. ಅವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ನಲ್ಲಿ 17 ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಆತ್ಮಶಕ್ತಿ ಸಹಕಾರಿ ಸಂಘ ಸಣ್ಣ ಅವಧಿಯೇ ಯಶಸ್ವಿಯಾಗಿದ್ದುಕೊಂಡು ಹಲವು ಶಾಖೆಗಳನ್ನು […]
