ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆದ 71 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಸಂಘ ಸಂಸ್ಥೆ ಕ್ಷೇತ್ರದಲ್ಲಿ ಅನುಪಮ ಸಾಧನೆಯನ್ನು ಮಾಡಿದ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರಿಗೆ ನೀಡಿ ಗೌರವಿಸಿದರು.

ಈ ಸಮಾರಂಭದಲ್ಲಿ ಶಾಸಕರಾದ ಯು.ಟಿ.ಖಾದರ್, ಡಾ! ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಭೋಜೇಗೌಡ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ನಿರ್ದೇಶಕರಾದ ಶ್ರೀ ವಾಮನ್ ಕೆ., ಶ್ರೀ ಜಿ. ಪರಮೇಶ್ವರ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಕಚೇರಿ ಹಾಗೂ ಹಾಸ್ಟೆಲ್ ಕಟ್ಟಡ ‘ಆತ್ಮಶಕ್ತಿ ಸೌಧ’ಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಪಡೀಲ್ ಬಳಿ ಇರುವ ಬೈರಾಡಿಕೆರೆಯ ಸಮೀಪ ಶುಕ್ರವಾರ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಪೂಜಾರಿ, ಈಗ ನಾನು ಪಿಂಚಣಿ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇನೆ. ಆರ್ಥಿಕವಾಗಿ ನಾನು ಅಷ್ಟೊಂದು ಸಬಲನಲ್ಲ. ಆದ್ದರಿಂದ ನನ್ನ ಪುತ್ರ ಸಂತೋಷ್ ಪೂಜಾರಿ ಈ ಕಟ್ಟಡದ ಕೆಲಸಕ್ಕೆ 5 ಲಕ್ಷ ರು. ಧನಸಹಾಯ ಮಾಡಲಿದ್ದಾರೆ ಎಂದರು. ನಾಮಫಲಕ ಬಿಡುಗಡೆಗೊಳಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಆತ್ಮಶಕ್ತಿ ಸಹಕಾರ ಸಂಘ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದೆ ಸಾಗುತ್ತಿದೆ. ಸಂಘವು 100 ಶಾಖೆಗಳನ್ನು ಹೊಂದುವ ಮೂಲಕ ಮೇಲ್ದರ್ಜೆಗೆ ಏರಲಿ ಎಂದು ಆಶಿಸಿದರು. ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ದ.ಕ ಜಿಲ್ಲೆ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸ0ಘ (ನಿ) ಬಿ.ಸಿ ರೋಡ್ ಶಾಖೆ ಇದರ 7ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಗ್ರಾಹಕರಾದ ಶ್ರೀ ರಮಾನಾಥ ಕಾರಂದೂರು, ಶ್ರೀ ರೋನಾಲ್ಡ್ ಡಿ’ಸೋಜ ಮತ್ತು ಶ್ರೀಮತಿ ಪ್ರೇಮರವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗ್ರಾಹಕರಾದ ಶ್ರೀ ರೋನಾಲ್ಡ್ ಡಿ’ಸೋಜರವರು “ಸಂಘದ ಸಿಬ್ಬಂದಿಗಳ ಶೀಘ್ರ ಹಾಗೂ ನಗು ಮೊಗದ ಸೇವೆ ಮತ್ತು ಆಡಳಿತ ಮಂಡಳಿಯವರ ಭಾವನಾತ್ಮಕ ಸೇವೆಯಿಂದ ಗ್ರಾಹಕರ ವ್ಯವಹಾರಕ್ಕೆ ಬಹಳ ಸಹಕಾರಿಯಾಗಿದೆ. ಈ ಸೇವೆ ಆತ್ಮಶಕ್ತಿ ಸಹಕಾರಿ ಸಂಘದಲ್ಲಿ ಸಿಗುತ್ತಿದೆ” ಎಂದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘವು ಮಾಡಿರುವ ಸಾಧನೆ ಹಾಗೂ ಸಂಘವು ತಮ್ಮ ಗ್ರಾಹಕರಿಗೆ ನಿರಂತರವಾಗಿ ಆಯ್ದ ಸರಕಾರಿ ರಜಾ ದಿನಗಳಲ್ಲೂ ಇ-ಸ್ಟ್ಯಾಂಪ್ ಸೇವೆಯನ್ನು […]

ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಪ್ರಶಸ್ತಿ ಪ್ರಧಾನ ಸಮಾರಂಭವು ಡಿಸೆಂಬರ್ 25ರಂದು ಪ್ರಬೋಧಂಕರ್ ಥಾಕ್ರೆ ಆಡಿಟೋರಿಯಂ, ಮುಂಬೈ ಯಲ್ಲಿ ಅಂತರಾಷ್ರೀಯ ಮಾನವ ಹಕ್ಕುಗಳು ಪೀಪಲ್ಸ್ ಕೌನ್ಸಿಲ್ ಇದರ ಅಧ್ಯಕ್ಷರಾದ ಲಯನ್ ಡಾ. ಶಂಕರ್ ಕೆ. ಶೆಟ್ಟಿ, ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಅನಿವಾಸಿ ಭಾರತೀಯ ಹಾಗೂ ಬಹರೈನ್ ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರಾದ ಶ್ರೀ ಲೀಲಾದರ್ ಬೈಕಂಪಾಡಿ ಇವರು ಉದ್ಘಾಟಿದರು. ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರು ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸಾಧನೆಗಾಗಿ ಅಂತರಾಷ್ರೀಯ ಮಾನವ ಹಕ್ಕುಗಳ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಶ್ರೀಯುತರು ಸಹಕಾರ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಸೇವೆಗೈದು ರಾಜ್ಯದಲ್ಲಿ ಅಲ್ಲದೆ ರಾಷ್ಟ್ರ […]